

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಹಗರಣ ಸಂಬಂಧಿಸಿದ ತನಿಖೆಯಿಂದ ಯಾರಿಗೂ ಏನು ಆಗುವುದಿಲ್ಲ. ಎಲ್ಲರೂ ಬಚಾವ್ ಆಗಿ ಇರುತ್ತಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸೂಚ್ಯವಾಗಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೇಶನ ಖರೀದಿಸಿದವರು, ಮಾರಾಟ ಮಾಡಿದವರು ಹೀಗೆ.. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರೂ ಆರೋಪಮುಕ್ತ ಆಗುತ್ತಾರೆ. ಈಗ ನಡೆಯುತ್ತಿರುವ ತನಿಖೆಯಿಂದ ಯಾವ ಪ್ರಯೋಜನವೂ ಇಲ್ಲ ಎಂದು ವಿಷಾದಿಸಿದರು.
ಮುಡಾದಲ್ಲಿ 3 ರಿಂದ 4 ಸಾವಿರ ಕೋಟಿ ರೂ. ಅಷ್ಟು ಹಗರಣ ನಡೆದಿದೆ. ಇದನ್ನು ತನಿಖೆ ಮಾಡಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಮನಸ್ಥಿತಿ ಸಿದ್ದರಾಮಯ್ಯ ಅವರಿಗೆ ಇಲ್ಲ. ನಾಲ್ಕು ದಿನ ಮಾಧ್ಯಮದಲ್ಲಿ ಬಂದಿದ್ದಷ್ಟೇ. ಇದರಲ್ಲಿರುವ ದೊಡ್ಡ ದೊಡ್ಡ ಭ್ರಷ್ಟಾಚಾರಿಗಳು, ಸೈಟ್ ಮಾರಾಟ ಮಾಡಿದವರು ಯಾರೂ ಸಿಕ್ಕಿ ಬೀಳುವುದಿಲ್ಲ ಎಂದರು.