ಹುಣಸೆಹೊಳೆ ಏಕೈಕ ಸನ್ಯಾಸಪೀಠ,  ಶ್ರೀ ವಿದ್ಯಾಕಣ್ವವಿರಾಜ ತೀರ್ಥರು,  ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಟ್ರಸ್ಟ್ ನಿಂದ ಸಮ್ಮೇಳನ

IMG-20241229-WA0006.jpg
Published on

ಹುಬ್ಬಳ್ಳಿ: ಹುಣಸೆಹೊಳೆಯು ಶುಕ್ಲ ಯಜುರ್ವೇದಿಗಳಿಗಿರುವ ಏಕೈಕ ಸನ್ಯಾಸಪೀಠ, ಭಕ್ತಾದಿಗಳೆಲ್ಲರೂ ಹುಣಸೆಹೊಳೆಯಲ್ಲಿರುವ ಉಪಾಸ್ಯ ದೇವರಾದ ಶ್ರೀ ವಿಠಲಕೃಷ್ಣನನ್ನು ಭಕ್ತಿಯಿಂದ ಆರಾಧಿಸುತ್ತಾರೆ ಎಂದು ಶ್ರೀ ಕಣ್ವ ಮಠ ಹುಣಸೆಹೊಳೆಯ ಪೀಠಾಧಿಪತಿ ಶ್ರೀ ವಿದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಗಳು ಹೇಳಿದರು.

ಇಲ್ಲಿಯ ಗೋಕುಲ ರಸ್ತೆಯ ಗೋಕುಲ ಗಾರ್ಡನ್ ನಲ್ಲಿ ಶ್ರೀಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಶ್ರೀಯೋಗೀಶ್ವರ ಯಾಜ್ಞವಲ್ಕ್ಯ ಬ್ರಹ್ಮರ್ಷಿ ಅನುಯಾಯಿಗಳ ರಾಜ್ಯ ಸಮ್ಮೇಳನದ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ನಿಮಿರ್ಸಲು ಉದ್ದೇಶಿಸಿರುವ ಶ್ರೀ ಯಾಜ್ಞವಲ್ಕ್ಯ ದೇವಸ್ಥಾನಕ್ಕೆ ಎಲ್ಲರೂ ಸಹಾಯ ಸಹಕಾರ ನೀಡಬೇಕು. ಇದರಿಂದ ದೇಗುಲ ನಿರ್ಮಾಣ ಶೀಘ್ರ ಪೂರ್ಣಗೊಳ್ಳಲು ನೆರವಾಗುತ್ತದೆ ಎಂದರು.

ಸಾಹಿತಿ ಶ್ರೀನಿವಾಸ ಸಿರನೂರಕರ್ ಮಾತನಾಡಿ, ಆಧುನಿಕ ವಿಜ್ಞಾನಕ್ಕೆ ಅಪರಿಚಿತವಾಗಿದ್ದ ಅನೇಕ ವಿಷಯಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಶ್ರೀಯಾಜ್ಞವಲ್ಕರು ಕರಾರುವಕ್ಕಾಗಿ ಹೇಳಿದ್ದಾರೆ. ಮನುಷ್ಯನ ಜನ್ಮ ಹೇಗಾಗುತ್ತದೆ, ಗರ್ಭದಲ್ಲಿ ಭ್ರೂಣದ ಬೆಳವಣಿಗೆ ಕುರಿತು ಪ್ರಯೋಗಾಲಯಗಳಿಲ್ಲದ ಸಾವಿರಾರು ವರ್ಷಗಳ ಹಿಂದೆಯೇ ವಿವರಿಸಿದ್ದಾರೆ ಎಂದರು.

ಸಮ್ಮೇಳನ ಕಾರ್ಯಾಧ್ಯಕ್ಷ ಸತ್ಯನಾರಾಯಣ ಮರಟಗೇರಿ ಮಾತನಾಡಿದರು.

ಸಮ್ಮೇಳನ ನಿರ್ಣಯಗಳು:
ಸಮ್ಮೇಳನದಲ್ಲಿ ಐದು ನಿರ್ಣಯಗಳನ್ನು ಮಂಡಿಸಿ ಅನುಯಾಯಿಗಳ ಜಯಘೋಷದ ಮಧ್ಯೆ ಅನುಮೋದನೆ ಪಡೆದುಕೊಳ್ಳಲಾಯಿತು.
-ರಾಜ್ಯದ ಎಲ್ಲ ಶುಕ್ಲಯಜುರ್ವೇದ ಸಂಘ ಸಂಸ್ಥೆಗಳಲ್ಲಿ ಹಾಗೂ ದೇವಸ್ಥಾನ, ಮಠಗಳಲ್ಲಿ ಶ್ರೀಯಾಜ್ಞವಲ್ಕ್ಯರ ಜಯಂತಿ ಆಚರಿಸುವುದು. -ಪ್ರತಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಶ್ರೀಯಾಜ್ಞವಲ್ಕರ ದೇವಸ್ಥಾನ ನಿರ್ಮಾಣ ಮಾಡುವುದು. -ರಾಜ್ಯದ ಯಾವುದೇ ಜಿಲ್ಲೆಯ ತಾಲೂಕಿನಲ್ಲಿ ಶ್ರೀಯಾಜ್ಞವಲ್ಕರ ದೇವಸ್ಥಾನ ನಿರ್ಮಿಸಿದರೆ ಮೂರ್ತಿ ಉಚಿತವಾಗಿ ನೀಡುವುದು ಹಾಗೂ ವಿಗ್ರಹ ಪ್ರತಿಷ್ಠಾಪನೆಯಲ್ಲಿ ಟ್ರಸ್ಟ್ ನಿಂದ ಅಗತ್ಯ ಸಹಕಾರ ನೀಡುವುದು. ಶ್ರೀಯಾಜ್ಞವಲ್ಕರ ಕಾರ್ಯಕಾರಿ ಮಂಡಳಿ ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಸ್ಥಾಪನೆಗೆ ಸಹಕರಿಸುವುದು. ಶ್ರೀ ಯೋಗೀಶ್ವರ ಯಾಜ್ಞವಲ್ಕ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ವಧು ವರರ ಸಮಾವೇಶ ನಡೆಸುವುದು.

ಗೋಷ್ಠಿಗಳು:
ಮಹಿಳಾ ಗೋಷ್ಠಿಯಲ್ಲಿ ಮಾತನಾಡಿದ ಅನುರಾಧ ಕುಲಕಣಿರ್ ಅವರು, ವಿಶ್ವವಿದ್ಯಾಲಯಗಳಲ್ಲಿ ಶ್ರೀ ಯೋಗೇಶ್ವರ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು. ಪಿಎಚ್.ಡಿ ಮಾಡಲು ಇದು ಪ್ರೇರಣೆಯಾಗುತ್ತದೆ ಹಾಗೂ ಮುಂದಿನ ಪೀಳಿಗೆಗೆ ಜ್ಞಾನ ಪಸರಿಸಿದಂತಾಗುತ್ತದೆ ಎಂದರು. ಪಂಡಿತ ಶ್ರೀ ಪ್ರದ್ಯುಮ್ನಾಚಾರ್ ಅವರು, ಈಶಾವಾಷ್ಯ ಉಪನಿಷತ್ ಕುರಿತು ಉಪನ್ಯಾಸ ನೀಡಿದರು. ವೇದಬ್ರಹ್ಮ ಡಾ. ಗಿರೀಶ ಶರ್ಮಾ ಶ್ರೀ ಯಾಜ್ಞವಲ್ಕ ಸ್ಮ$ತಿ ಕುರಿತು ಉಪನ್ಯಾಸ ನೀಡಿದರು.

ಕಣ್ವ ಪರಿಷತ್ತಿನ ರಾಜ್ಯಾಧ್ಯಕ್ಷ ಕಿಸಾನರಾವ್ ಕುಲಕರ್ಣಿ ಹಾಗೂ ಶುಕ್ಲ ಯಾಜು ಶಾಖೆ ಟ್ರಸ್ಟ್ ಅಧ್ಯಕ್ಷ ವೈ.ವಿ. ವೇಣುಗೋಪಾಲ ಮಾತನಾಡಿದರು. ಗಂಗಾವತಿ ಪ್ರಾಣೇಶ ಅವರಿಗೆ ಜ್ಞಾನಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಟ್ರಸ್ಟ್ ಗೌರವಾಧ್ಯಕ್ಷ ಶಂಕರಭಟ್ ಜೋಶಿ, ಮಲ್ಹಾರಾವ ಗಾರಂಪಳ್ಳಿ, ಗಿರೀಶ ಕುಲಕರ್ಣಿ, ಮುದ್ದುರಾವ್ ಕುಲಕರ್ಣಿ, ಅರುಣ ಬಾದಾಮಿ, ಬಾಲಕೃಷ್ಣ ಕುಲಕರ್ಣಿ, ಚಿದಂಬರ ಜೋಶಿ, ಯೋಗಾನಂದ ಕುಲಕರ್ಣಿ, ವಿನುತ ಜೋಶಿ, ಪ್ರಾಣೇಶ ಜೋಶಿ, ಮುರಳಿಧರ್ ಕುಲಕರ್ಣಿ ಹಾಗೂ ರಾಜ್ಯದ ವಿವಿಧ ಜಿಲ್ಲಾ ಹಾಗೂ ತಾಲೂಕಗಳ ಅನುಯಾಯಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net