

ತುಮಕೂರು: ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಯೋಗಾಸನ ಭಾರತ ಸಂಸ್ಥೆ, ಕರ್ನಾಟಕ ಯೋಗಾಸನ ಸ್ಫೋರ್ಟ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ನಾಲ್ಕು ದಿನ ಆಯೋಜಿಸಿದ್ದ 5ನೇ ರಾಷ್ಟ್ರೀಯ ಹಿರಿಯರ ಯೋಗಾಸನ ಸ್ಪರ್ಧೆಗೆ ಭಾನುವಾರ ತೆರೆಬಿದ್ದಿತು.
ಸಮಾರಂಭದಲ್ಲಿ ಯೋಗಾಸನ ಭಾರತ್ ಸಂಸ್ಥೆ ಅಧ್ಯಕ್ಷ ಉದಿತ್ಶೆತ್ ಮಾತನಾಡಿ, ಇಂದು ಏಷ್ಯಾ ಚಾಂಪಿಯನ್ ಶಿಫ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಎಲ್ಲರೂ ಚೆನ್ನಾಗಿ ಅಭ್ಯಾಸ ಮಾಡಿ, ದೇಶಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ವಿಜೇತ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
ಕರ್ನಾಟಕ ಯೋಗಾಸನ ಸ್ಫೋರ್ಟ್ ಅಸೋಸಿಯೇಷನ್ ಅಧ್ಯಕ್ಷ ಲಕ್ಷಿ$್ಮನಾರಾಯಣ ಮಾತನಾಡಿ, ತುಮಕೂರು ನಗರದಲ್ಲಿ ಯೋಗ ಸೇರಿ ಎಲ್ಲ ಕ್ರೀಡೆಯನ್ನು ಮತ್ತಷ್ಟು ಉದ್ದೀಪನಗೊಳಿಸಲು ಅವಕಾಶವಿದೆ. ಯೋಗಾಸನ ಇಂದು ಪಠ್ಯ ಮತ್ತು ಪಠ್ಯೇತರ ವಿಷಯವಾಗಿ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ ಎಂದರು.
2014ರಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಯೋಗದಿನ ಘೋಷಣೆ ಮಾಡಿದ ನಂತರ ಸಾಕಷ್ಟು ಬದಲಾವಣೆಗಳಾಗಿವೆ. ಕಲಿಯಲು ಹೆಚ್ಚಿನ ಜನರು ಮುಂದೆ ಬರುತ್ತಿದ್ದಾರೆ ಎಂದರು.
ಕರ್ನಾಟಕ ಯೋಗಾಸನ ಸ್ಫೋರ್ಟ್ ಅಸೋಸಿಯೇಷನ್ ಕಾರ್ಯದರ್ಶಿ ನಿರಂಜನ್ಮೂರ್ತಿ ಮಾತನಾಡಿ, ರಾಷ್ಟ್ರೀಯ ಸ್ಪರ್ಧೆಯನ್ನು ಸವಾಲಾಗಿ ಸ್ವೀಕರಿಸಿ, ತುಮಕೂರಿನಲ್ಲಿ ಆಯೋಜಿಸಿ ಯಶಸ್ವಿಗೊಳಿಸಿದ್ದಾರೆ. ಸ್ಥಳಿಯರ ಸಹಕಾರವೇ ಇದಕ್ಕೆ ಕಾರಣ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಕೌಶಲಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಸ್ಪರ್ಧೆಯಲ್ಲಿ 26 ರಾಜ್ಯಗಳ 900ಕ್ಕೂ ಹೆಚ್ಚು ಯೋಗಪಟುಗಳು ಪ್ರದರ್ಶನ ನೀಡಿದ್ದಾರೆ. ಹಿರಿಯರಾದ ಸೊಗಡು ಶಿವಣ್ಣ, ನಿರಂಜನಮೂರ್ತಿ, ದಿವ್ಯಾ ಇವರುಗಳ ಸಹಕಾರದಲ್ಲಿ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದರು.
ಕೇರಳದ ಶ್ರೀ ಭದ್ರನಾಥ ಸ್ವಾಮೀಜಿ ಮಾತನಾಡಿ, ಇಲ್ಲಿನ ಸರ್ಕಾರ ಯುವಜನತೆ ಸರಿಯಾದ ದಾರಿಗೆ ತರಲು ಸನಾತನ ಕ್ರೀಡೆಯಾಗ ಯೋಗ ಕಲಿಸುತ್ತಿದೆ. ಸ್ಥೂಲ ಶರೀರ, ಸೂಕ್ತ ಶರೀರ ಆಗಲು ಯೋಗ ಸಹಕಾರಿಯಾಗಿದೆ.
ಮನುಷ್ಯನ ದೈಹಿಕ, ಮಾನಸಿಕ ಮತ್ತು ಶಾರೀರಿಕ ಸಮತೋಲನಕ್ಕೆ ಯೋಗ ಪೂರಕವಾಗಿದೆ, ಭಾರತದ ಭವಿಷ್ಯ ಇಂತಹ ಯುವಜನರ ಮೇಲೆ ನಿಂತಿದೆ ಎಂದರು.
ಎಸ್ಬಿಐ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಚೌಹಾಣ್ ಮಾತನಾಡಿ, ಎಸ್ಬಿಐ ಯೋಗ ಸೇರಿದಂತೆ ಎಲ್ಲ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಯೋಗದಿಂದ ಶಿಸ್ತು, ಸಂವೇದನ ಶೀಲತೆ ಹೆಚ್ಚು, ಒರ್ವ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ ಎಂದರು.
ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕ್ರೀಡಾಕೂಟ ಆಯೋಜಕರಾದ ಮಾಜಿ ಸಚಿವ ಸೊಗಡು ಶಿವಣ್ಣ, ಮಮತಾ, ವಕೀಲ ಆರ್.ಡಿ.ಕುಮಾರ್, ರೋಟರಿ ಅಧ್ಯೆ ರಾಜೇಶ್ವರಿ, ಧನಿಯಕುಮಾರ್, ಇಸ್ಮಾಯಿಲ್, ಯೋಗಾಸನ ಭಾರತ್ ಖಜಾಂಚಿ ರಚಿತ್ ಕೌಶಿಕ್, ಚಿಕ್ಕಣ್ಣ, ನಿರಂಜನ್ ರೆಡ್ಡಿ, ಹರ್ಷನ್ ಆರ್.ಶೆಟ್ಟಿ, ದಿವ್ಯಾ ಮತ್ತಿತರರು ಇದ್ದರು.
ಯೋಗಾಸನ ಭಾರತ್ ಐದು ವರ್ಷದ ಸಂಸ್ಥೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಿಂದ ಇಂತಹ ಒಂದು ದೊಡ್ಡ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಯೋಗಪಟುಗಳನ್ನು ಮುಂದಿನ ಎಷ್ಯಾ ಗೇಮ್ಸ್ ಮತ್ತು ಒಲಂಪಿಕ್ ಗ್ರೇಮ್ಸ್ಗೆ ಸಿದ್ಧಪಡಿಸುವ ಕೆಲಸ ಮಾಡುತ್ತಿದೆ. ಇದರ ಹಿಂದೆ ಅನೇಕರ ಶ್ರಮವಿದೆ. | ಉದಿತ್ಶೆತ್ ಯೋಗಾಸನ, ಭಾರತ್ ಸಂಸ್ಥೆ ಅಧ್ಯಕ್ಷ