ಯೋಗೇಶ್ವರ್ ಜೆಡಿಎಸ್ ಟಿಕೆಟ್ ನಿರಾಕರಿಸಿದ್ದಾರೆ: ಮಾಜಿ ಶಾಸಕ ಎ.ಮಂಜುನಾಥ್

21-10-rama-a manju press meet
Published on


ರಾಮನಗರ: ಜೆಡಿಎಸ್​ ಚಿಹ್ನೆಯಡಿ ಸ್ಪರ್ಧೆಗೆ ಒಪ್ಪಿದ್ದ ಸಿ.ಪಿ.ಯೋಗೇಶ್ವರ್​ ಅವರು ಈಗ ಬೇಡ ಎನ್ನುತ್ತಿದ್ದು, ನಿಖಿಲ್​ ಕುಮಾರಸ್ವಾಮಿ ಅವರ ಸ್ಪರ್ಧೆಗೆ ಕಾರ್ಯಕರ್ತರು ಸೇರಿದಂತೆ ಎಲ್ಲರೂ ಒತ್ತಡ ಹೇರುತ್ತಿದ್ದೇವೆ ಎಂದು ಜೆಡಿಎಸ್​ ಜಿಲ್ಲಾ ಟಕದ ಅಧ್ಕಷ ಹಾಗೂ ಮಾಜಿ ಶಾಸಕ ಎ.ಮಂಜುನಾಥ್​ ಹೇಳಿದರು.

ನಗರದ ಖಾಸಗಿ ಹೋಟೆಲ್​ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ಅವಧಿಯಿಂದಲೂ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್​ ಪ್ರತಿನಿಧಿಸುತ್ತಿರುವ ಹಿನ್ನೆಲೆಯಲ್ಲಿ ಉಪಚುನಾವಣೆ ಅಭ್ಯರ್ಥಿ ಆಯ್ಕೆ ನಿರ್ಧಾರವನ್ನು ಜೆಡಿಎಸ್​ ಗೆ ಬಿಟ್ಟುಕೊಡಲಾಗಿದೆ. ಇದರಿಂತೆ ಮಾಜಿ ಪ್ರಧಾನಿ ದೇವೇಗೌಡರು, ಕೇಂದ್ರ ಸಚಿವರಾದ ಎಚ್​.ಡಿ.ಕುಮಾರಸ್ವಾಮಿ, ಯುವ ಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಅವರು, ಕೋರ್​ ಕಮಿಟಿ ಸದಸ್ಯರು ಸಭೆಗಳನ್ನು ನಡೆಸುವ ಮೂಲಕ ಯೋಗೇಶ್ವರ್​ ಅವರ ಸ್ಪರ್ಧೆಯನ್ನು ಅಖೈರುಗೊಳಿಸಲಾಗಿತ್ತು.
ಮೊದಲು ಚಿಹ್ನೆ ಮುಖ್ಯವಲ್ಲ, ಎನ್​ ಡಿಎ ಗೆಲುವು ಮುಖ್ಯ ಎಂದು ಸ್ಪರ್ಧೆಗೆ ಒಪ್ಪಿದ್ದ ಯೋಗೇಶ್ವರ್​ ಅವರನ್ನು ಈಗ ಕಾರ್ಯಕರ್ತರು ಒಪು$್ಪತ್ತಿಲ್ಲ ಎನ್ನುವ ಕಾರಣ ನೀಡಿ, ಸ್ಪರ್ಧೆ ಮಾಡುವುದಿಲ್ಲ ಎಂದಿದ್ದಾರೆ. ಈ ಮೂಲಕ ನಮ್ಮ ಪಕ್ಷದಿಂದ ನೀಡಿದ್ದ ಆಹ್ವಾನವನ್ನು ಅವರು ತಿರಸ್ಕಾರ ಮಾಡಿದ್ದಾರೆ ಎಂದು ಮಂಜುನಾಥ್​ ಹೇಳಿದರು.

ಯೋಗೇಶ್ವರ್​ ಅವರ ಸ್ಪರ್ಧೆ ನಿರಾಕರಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಯಾರಗಬೇಕು ಎನ್ನುವ ತೀರ್ಮಾನ ಆಗಬೇಕಿದೆ. ಪ್ರಭಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿ ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು ಎನ್ನುವ ನಿರ್ಧಾರ ನಮ್ಮೆಲ್ಲರದ್ದಾಗಿದೆ. ಈ ಹಿನ್ನೆಲೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಅವರನ್ನೇ ಕಣಕ್ಕೆ ಇಳಿಸುವಂತೆ ಸ್ಥಳಿಯ ಕಾರ್ಯಕರ್ತರು ಹಾಗೂ ಮುಖಂಡರು ಒತ್ತಡ ಹಾಕುತ್ತಿದ್ದಾರೆ. . ಒಂದೆರಡು ದಿನಗಳಲ್ಲಿ ಅಭ್ಯರ್ಥಿ ಅಂತಿಮ ಆಗಲಿದೆ ಎಂದರು.

ಒಂದು ವೇಳೆ ನಿಖಿಲ್​ ಒಪ್ಪದಿದ್ದರೆ ಸ್ಥಳಿಯ ಪ್ರಭಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎನ್ನುವ ಆಸೆ ನಮಗೂ ಇದೆ. ನಿಖಿಲ್​ ಪಕ್ಷ ಸಂಟನೆ ಮಾಡಬೇಕು, ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ. ಇದರ ಹೊರತಾಗಿಯೂ ಅವರು ಸ್ಪರ್ಧೆ ಮಾಡುವಂತೆ ಒತ್ತಡ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ನಿಖಿಲ್​ ಒಂದು ವೇಳೆ ಸೋತರೆ ಎನ್ನುವ ಪ್ರಶ್ನೆಯೇ ಇಲ್ಲ, ಹಿಂದಿನ ಎರಡು ಚುನಾವಣೆಗಳಲ್ಲಿ ಅವರು ರಾಜಕೀಯ ಷಡ್ಯಂತ್ರಕ್ಕೆ ಹಾಗೂ ಇತಶತ್ರುಗಳ ಒಳಸಂಚಿಗೆ ಬಲಿಯದರು. ಹಿಂದಿನ ಸೋಲಿಂಗಳಿಂದ ಅವರೂ ಸಾಕಷ್ಟು ಕಲಿತಿದ್ದು, ಈ ಬಾರಿ ಹಿಂದಿನಂತೆ ಆಗಲು ಸಾಧ್ಯವಿಲ್ಲ ಎಂದು ಮಂಜುನಾಥ್​, ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಮತ್ತು ಕೋಲಾರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಂತೆ ಚನ್ನಪಟ್ಟಣವನ್ನು ಬಿಜೆಪಿಗೆ ಬಿಟ್ಟುಕೊಡಿ ಎನ್ನುವ ಕಮಲ ಪಾಳಯದ ನಾಯಕರ ವಾದವನ್ನು ತಳ್ಳಿಹಾಕಿದರು.


ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ ಗಳಿಸಿದ ಮತಗಳ ಆಧಾರದ ಮೇಲೆಯೇ ಕೋಲಾರ ಮತ್ತು ಮಂಡ್ಯವನ್ನು ಜೆಡಿಎಸ್​ಗೆ ಬಿಟ್ಟುಕೊಡಲಾಗಿದೆ. ಆದರೆ ವಿಧಾನಸಭೆ. ಲೋಕಸಭೆ ಚುನಾವಣೆ ಬೇರೆ, ಉಪ ಚುನಾವಣೆಯೇ ಬೇರೆ ಎಂದು ವಿಶ್ಲೇಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನಾಗರಾಜು, ಸಬ್ಬಕೆರೆ ಶಿವಲಿಂಗಪ್ಪ, ಮಂಜುನಾಥ್​, ರವಿ, ರಮೇಶ್​, ಹೋಟೆಲ್​ ಉಮೇಶ್​, ರಾಮಕೃಷ್ಣಯ್ಯ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net