15 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗಾಥಾನ್

CTD 13 YOAGTAN-04
Published on

ಚಿತ್ರದುರ್ಗ ನಗರದ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಜ. 15ರಂದು ಸ್ವಾಮಿ ವಿವೇಕಾನಂದ ಜನ್ಮದಿನದ ಅಂಗವಾಗಿ ಏರ್ಪಡಿಸಿರುವ ಯೋಗಥಾನ್ ಕಾರ‌್ಯಕ್ರಮದಲ್ಲಿ 8 ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಹೇಳಿದರು.

ಡಿಸಿ ಕಚೇರಿಯಲ್ಲಿ ಶುಕ್ರವಾರ ಕಾರ‌್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 8 ಗಂಟೆಗೆ ಕಾರ‌್ಯಕ್ರಮ ಪ್ರಾರಂಭವಾಗಲಿದ್ದು, ಗಿನ್ನಿಸ್ ದಾಖಲೆ ಗುರಿಯೊಂದಿಗೆ ಆಯೋಜಿಸಿರುವ ಈ ಕಾರ‌್ಯಕ್ರಮಕ್ಕೆ ಬೆಳಗ್ಗೆ 7.30 ರೊಳಗೆ ಶಾಲಾ- ಕಾಲೇಜು ವಿದ್ಯಾರ್ಥಿಗಳನ್ನು ಸಂಬಂಧಿಸಿದ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಕರೆ ತರಬೇಕು. 45 ನಿಮಿಷಗಳ ಕಾಲ ಯೋಗಾಭ್ಯಾಸ ಇರುತ್ತದೆ.

ಶಿಷ್ಟಾಚಾರ, ಭದ್ರತೆ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಎಲ್ಲೂ ಲೋಪವಾಗಬಾರದು. ನೀರು, ಊಟೋಪಚಾರ, ಸ್ವಚ್ಛತೆ ಹಾಗೂ ಆಂಬುಲೆನ್ಸ್ ಸೇರಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದರು.

2300 ಕಾಲೇಜು ಹಾಗೂ 5350 ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಕಳೆದೊಂದು ವಾರದಿಂದ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಲಾಗುತ್ತಿದೆ ಎಂದು ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜು ತಿಳಿಸಿದರು.

ಆಯುಷ್ ಅಧಿಕಾರಿ ಡಾ.ಶಿವಕುಮಾರ್ ಮಾತನಾಡಿ, ಜಿಲ್ಲೆಯ ವಿವಿಧ ಯೋಗ ಸಂಸ್ಥೆಗಳಿಂದ 800 ರಿಂದ 1000 ಜನ ಯೋಗ ಪಟುಗಳು ಭಾಗವಹಿಸಲಿದ್ದಾರೆ. ಕಾರ‌್ಯಕ್ರಮದಲ್ಲಿ 20 ಯೋಗಾಸನ ಅಭ್ಯಾಸವಿರುತ್ತದೆ ಎಂದು ಪತಂಜಲಿ ಯೋಗ ಸಂಸ್ಥೆ ಶ್ರೀನಿವಾಸ್ ಹೇಳಿದರು.

ಏಳುನೂರಕ್ಕೂ ಹೆಚ್ಚು ಎನ್‌ಸಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಎನ್‌ಎಸ್‌ಎಸ್ ಅಧಿಕಾರಿ ಲೋಕೇಶ್‌ನಾಯ್ಕ ಹಾಗೂ ಎನ್‌ಸಿಸಿ ಅಧಿಕಾರಿ ಡಾ.ಎಸ್.ಆರ್.ಲೇಪಾಕ್ಷ ತಿಳಿಸಿದರು.

ಜಿಪಂ ಡಿಎಸ್ ಡಾ.ರಂಗಸ್ವಾಮಿ, ಆರ್‌ಎಂಒ ಡಾ.ಆನಂದ ಪ್ರಕಾಶ್, ಎಸಿ ಆರ್.ಚಂದ್ರಯ್ಯ, ತಹಸೀಲ್ದಾರ್ ಸತ್ಯನಾರಾಯಣ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷಿ ್ಮೀಬಾಯಿ ಮತ್ತಿತರ ಅಧಿಕಾರಿಗಳಿದ್ದರು.

(ಸಿಟಿಡಿ 13 ಯೋಗಥಾನ್)

ಸ್ವಾಮಿ ವಿವೇಕಾನಂದ ಜನ್ಮದಿನದ ಅಂಗವಾಗಿ ಚಿತ್ರದುರ್ಗದಲ್ಲಿ ಆಯೋಜಿಸುತ್ತಿರುವ ಯೋಗಾಥಾನ್ ಕುರಿತು ಶುಕ್ರವಾರ ಡಿಸಿ ಜಿ.ಆರ್.ಜೆ.ದಿವ್ಯಾಪ್ರಭು ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು. ಎಸಿ ಆರ್.ಚಂದ್ರಯ್ಯ, ಜಿಪಂ ಡಿಎಸ್ ಡಾ.ರಂಗಸ್ವಾಮಿ, ತಹಸೀಲ್ದಾರ್ ಸತ್ಯನಾರಾಯಣ ಇತರರು ಇದ್ದರು.

-----

======

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net