ಕನ್ನಡ ಸಾರಸ್ವತಕ್ಕೆ ಯೋಗಸ್ಥ ದೊಡ್ಡ ಕೊಡುಗೆ

Yogastha is a great contribution to Kannada Saraswat
ಮುಧೋಳದ ಹೇಮರಡ್ಡಿ ಮಲ್ಲಮ್ಮ ಸಭಾ ಭವನದಲ್ಲಿ ಸಿದ್ಧೇಶ್ವರ ಶ್ರೀಗಳ ಕುರಿತ ಯೋಗಸ್ಥ ಕೃತಿ ಲೋಕಾರ್ಪಣೆಗೊಂಡಿತು. ಲೇಖಕ ಡಾ.ರಾಜಶೇಖರ ಮಠಪತಿ, ಚಂದ್ರಶೇಖರ ದೇಸಾಯಿ, ಡಾ. ತಿಮ್ಮಣ್ಣ ಅರಳಿಕಟ್ಟಿ, ಡಾ. ವಿಜಯಕುಮಾರ ಕಟಗಿಹಳ್ಳಿಮಠ ಇತರರಿದ್ದರು.
Published on

ಮುಧೋಳ: ಶತಮಾನದ ಸಂತ ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮಿಗಳ ವ್ಯಕ್ತಿತ್ವ ಕುರಿತ ಕೃತಿ 'ಯೋಗಸ್ಥ' ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ ಎಂದು ವಿಜಯಪುರದ ಡಾ. ಫ.ಗು. ಹಳಕಟ್ಟಿ ವಚನ ಸಾಹಿತ್ಯ ಕೇಂದ್ರದ ಸಂಚಾಲಕ ಡಾ. ಮಹಾಂತೇಶ ಬಿರಾದಾರ ಹೇಳಿದರು.

ಹಿರಿಯ ನಾಗರಿಕರ ವೇದಿಕೆ, ಶಶಿ ಟ್ರಸ್ಟ್ ಕವಿಚಕ್ರವರ್ತಿ ರನ್ನ ಮುಧೋಳ ಸಹಯೋಗದಲ್ಲಿ ಸೋಮವಾರ ನಗರದ ಹೇಮರಡ್ಡಿ ಮಲ್ಲಮ್ಮ ಸಭಾಭವನದಲ್ಲಿ ರಾಗಂರ 'ಯೋಗಸ್ಥ' ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಿದ್ಧೇಶ್ವರ ಸ್ವಾಮೀಜಿಗಳ ವ್ಯಕ್ತಿತ್ವ ಕುರಿತ ಕೃತಿಗಳು ಹೊರಬಂದು ಹೊಸ ತಲೆಮಾರಿನ ಯುವ ಸಮೂಹಕ್ಕೆ ಉತ್ತೇಜನ ನೀಡುವಂತಾಗಬೇಕು ಎಂದರಲ್ಲದೆ, ಪ್ರಸ್ತುತ ರಾಜಕೀಯ ನಾಯಕರಿಗೆ ಟೀಕೆ ಸಹಜ. ಆದರೆ, ಜನಪ್ರತಿನಿಧಿಗಳಿಲ್ಲದೆ ಯಾವುದೇ ಕಾರ್ಯಗಳಾಗುವುದಿಲ್ಲ ಎಂದರು.
ಸಾಹಿತಿ ಡಾ. ವಿಜಯಕುಮಾರ ಕಟಗಿಹಳ್ಳಿಮಠ, ಡಾ. ಶಿವಾನಂದ ಕುಬಸದ ಮಾತನಾಡಿ, ಬದುಕಿನ ವಿವಿಧ ಮಜಲುಗಳನ್ನು ಹತ್ತಿರದಿಂದ ತಿಳಿದುಕೊಳ್ಳಲು ರಾಗಂರ ಯೋಗಸ್ಥ ಕೃತಿ ಓದಬಹುದಾಗಿದೆ ಎಂದರು.

ಲೇಖಕ ಡಾ. ರಾಜಶೇಖರ ಮಠಪತಿ ಮಾತನಾಡಿ, ನನ್ನೆಲ್ಲ ಶಕ್ತಿಯಾಗಿದ್ದವರು ಸಿದ್ಧೇಶ್ವರ ಸಾಮೀಜಿಗಳು. ಅವರ ಮಾರ್ಗದರ್ಶನದಿಂದ 102 ಕೃತಿಗಳನ್ನು ರಚಿಸಿರುವೆ ಎಂದರು.

ಸಂಘಟಕ ಚಂದ್ರಶೇಖರ ದೇಸಾಯಿ ಭಿನ್ನವತ್ತಳೆ ಅರ್ಪಿಸಿದರು. ಡಾ. ತಿಮ್ಮಣ್ಣ ಅರಳಿಕಟ್ಟಿ, ಕಲ್ಲಪ್ಪ ಸಬರದ, ಎಂ.ಜಿ. ದಾಸರ, ಡಾ. ಸಿದ್ದು ದಿವಾಣ, ಎಂ.ವಿ. ದಾಸರಡ್ಡಿ, ಡಾ.ಜಯಶ್ರೀ ಭಂಡಾರಿ, ಗುರುನಾಥ ಸುತಾರ, ಶಿವಾನಂದ ಮರೆಗುದ್ದಿ, ಮಲ್ಲಿಕಾರ್ಜುನ ಅರಬ್ಬಿ, ಆನಂದ ಪೂಜಾರಿ, ಡಾ. ಸಿದ್ದಣ್ಣ ಬಾಡಗಿ, ಚಂದ್ರಶೇಖರ ರೂಗಿ ಇತರರಿದ್ದರು.

ಸಾಹಿತಿಗಳು, ಕವಿಗಳು ಕೃಷ್ಣೆಯ ಪ್ರಸ್ತಾಪ ಮಾಡಿ ಯುಕೆಪಿ ನೋವುಗಳ ಕುರಿತು ಸ್ಪಂದಿಸುವ ಬರಹಗಳು ಹೊರಬರಬೇಕಾಗಿದೆ. ಸಿದ್ಧೇಶ್ವರ ಮಹಾಸ್ವಾಮಿಗಳ ಕುರಿತು ರಾಗಂ ಬರೆದ ಕೃತಿ ಅತ್ಯಮೂಲ್ಯವಾಗಿದೆ.
ಹಣಮಂತ ನಿರಾಣಿ, ಎಂಎಲ್‌ಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net