ಕೆರೆಯ ನೀರಿನ ಮೇಲೆ ಯೋಗಾಸನ

21 gkp 01
Published on

ಗೋಣಿಕೊಪ್ಪ: ಯೋಗ ದಿನಾಚರಣೆ ಅಂಗವಾಗಿ ಆರ್ಟ್ ಆಫ್ ಲಿವಿಂಗ್‌ನ ರಾಜ್ಯ ಶಿಕ್ಷಕರ ಸಮಿತಿ ಸಂಚಾಲಕ ಅಳಮೇಂಗಡ ಡಾನ್ ರಾಜಪ್ಪ ಕೆರೆಯ ನೀರಿನಲ್ಲಿ ಬಿದಿರನ್ನು ತಟ್ಟೆಯಂತೆ ಮಾಡಿ ಅದರ ಮೇಲೆ ಯೋಗಾಸನ ಮಾಡಿದರು.

ಶಿರಾಸನ ಮತ್ತು ಸರ್ವಾಂಗಾಸನ ಭಂಗಿ ಪ್ರದರ್ಶಿಸುವ ಮೂಲಕ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದರು. ಅಲ್ಲದೆ ನೀರಿನಲ್ಲಿ ತೇಲುವ ವಿಶೇಷ ಅನುಭವದೊಂದಿಗೆ ಸಂಭ್ರಮಿಸಿದರು.

ಕೆರೆಯಲ್ಲಿ ಈಜಾಡುವಂತೆ ಬಿದಿರು ವಸ್ತುಗಳನ್ನು ತಟ್ಟೆಯಂತೆ ಬಳಸಿ, ಅದರ ಮೇಲೆ ಯೋಗ ಪ್ರದರ್ಶಿಸಿದರು. ಇವರ ಪತ್ನಿ ಲಕ್ಷ್ಮೀ ಹಾಗೂ ಮಕ್ಕಳು ಕೂಡ ಯೋಗ ಪಟುಗಳಾಗಿದ್ದು, ಕೆರೆಯ ದಂಡೆಯಲ್ಲಿ ಯೋಗಾಭ್ಯಾಸ ನಡೆಸಿದರು. ಆರ್ಟ್ ಆಫ್ ಲಿವಿಂಗ್‌ನ ಸದಸ್ಯರು ತಮ್ಮ ಮನೆಯಲ್ಲಿ ಯೋಗ ಮಾಡಿದರು. ಪಾಲಿಬೆಟ್ಟ ಚೆಷೈರ್ ಹೋಂನಲ್ಲಿ ಸ್ಥಳೀಯರು ಯೋಗ ಪ್ರದರ್ಶಿಸಿದರು.

ಚೆಷೈರ್ ಹೋಂ ಅಂಗವಿಕಲ ಶಾಲೆ ಮುಖ್ಯ ಶಿಕ್ಷಕ ಶಿವರಾಜ್ ಪಾಲ್ಗೊಂಡಿದ್ದರು. ಕುಟ್ಟ ಪ್ರಾಥಮಿಕ ಶಾಲೆ ಶಿಕ್ಷಕಿ ಅಲೀಮಾ ತನ್ನ ಮಗನೊಂದಿಗೆ ಯೋಗಾಭ್ಯಾಸ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net