

ಹುಬ್ಬಳ್ಳಿ : ಇಲ್ಲಿನ ವಿದ್ಯಾನಗರದ ಶ್ರೀ ಕನಕದಾಸ ಕಾಲೇಜಿನ ಡಾ. ಬಿ.ಎಫ್. ದಂಡಿನ ಸಭಾಭವನದಲ್ಲಿ ಜು. 20ರಂದು ಬೆಳಗ್ಗೆ 8.30ಕ್ಕೆ ಧಾರವಾಡ ಮತ್ತು ಗದಗ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ 10 ವಿಭಾಗದಲ್ಲಿ ವಯಸ್ಸಿನ ಮಿತಿಗೆ ಅನುಸಾರವಾಗಿ ಯೋಗ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಗದಗ ಹಾಗೂ ಧಾರವಾಡ ಜಿಲ್ಲೆಯ ಶಾಲೆ ( 10 ಮತ್ತು ಮೇಲ್ಪಟ್ಟ ವಯಸ್ಸು), ಕಾಲೇಜು ವಿದ್ಯಾರ್ಥಿಗಳು ಮತ್ತು 18 ರಿಂದ 55 ರ ವರೆಗಿನ ವಯೋಮಾನದ ಪುರುಷ ಮತ್ತು ಮಹಿಳಾ ಯೋಗ ಪಟುಗಳು, ಯೋಗ ಸಾಧಕರು, ಯೋಗಾಸಕ್ತರು ಭಾಗವಹಿಸುವಂತೆ ಕೋರಲಾಗಿದೆ.
ಆಯ್ಕೆಯಾದ ಯೋಗಪಟುಗಳು ಮುಂದಿನ ಬರುವ ಆಗಸ್ಟ್ನಲ್ಲಿ ನಡೆಯುವ ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆಯುತ್ತಾರೆ ಎಂದು ಯೋಗಾಸನ ಭಾರತದ ರಾಷ್ಟ್ರೀಯ ನಿರ್ದೇಶಕ ಹಾಗೂ ಧಾರವಾಡ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾದ ಯೋಗ ಗುರು ಭವರಲಾಲ್ ಆರ್ಯ ಅವರು ತಿಳಿಸಿದ್ದಾರೆ.