

ಮಂಗಳೂರು: ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ 40ನೇ ವರ್ಷದ ಯೋಗ ಶಿಬಿರ ಮಂಗಳಾದೇವಿಯ ರಾಮಕೃಷ್ಣ ಮಠದಲ್ಲಿ ಇತ್ತೀಚೆಗೆ ನಡೆಯಿತು.
ಸಮಾರೋಪದಲ್ಲಿ ಯೋಗಾಸನ, ಪ್ರಾಣಾಯಾಮ, ಮಂತ್ರಮುದ್ರೆ ಮತ್ತು ಧ್ಯಾನದ ಬಗ್ಗೆ ಗೋಪಾಲಕೃಷ್ಣ ದೇಲಂಪಾಡಿಯವರು ಮಾಹಿತಿ ನೀಡಿ, ಕೆಲವೊಂದು ಆಸನ ಮತ್ತು ಮಂತ್ರ ಮುದ್ರೆಗಳನ್ನು ಪ್ರದರ್ಶಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ದಿನನಿತ್ಯ ಯೋಗ ಅಭ್ಯಸಿಸಿದರೆ ಅದುವೇ ಗುರುವಿಗೆ ನೀಡುವ ಗುರುದಕ್ಷಿಣೆ ಎಂದರು. ಡಾ.ಮಹೇಶ್ ಮಾತನಾಡಿ, ನಮ್ಮ ಆರೋಗ್ಯ ಹದಗೆಡುವವರೆಗೆ ಕಾಯದೆ ಆರೋಗ್ಯದಲ್ಲಿ ಇರುವಾಗಲೇ ಯೋಗ ರೂಢಿಸಿಕೊಳ್ಳಬೇಕು. ಗುರುಗಳು ಯೋಗವನ್ನು ಮುಖ್ಯವಾಹಿನಿಗೆ ತರಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಅವರ ಅವಿರಿತ ಶ್ರಮಕ್ಕೆ ನಾವೆಲ್ಲ ಕೈಜೋಡಿಸಬೇಕು ಎಂದು ಹೇಳಿದರು.
60 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸುಮಾ ಶೆಟ್ಟಿ ಮತ್ತು ಚಂದ್ರಹಾಸ ಸಹಕರಿಸಿದರು, ಮಲ್ಲಿಕಾ ರಕ್ಷಿತ್ ಅತ್ತಾವರ್ ಕಾರ್ಯಕ್ರಮ ನಿರೂಪಿಸಿದರು.