ಮೈಸೂರು: ಶ್ರೀರಾಂಪುರ ಎರಡನೇ ಹಂತದ ಹಾರ್ಟ್ ಬೀಟ್ ಡ್ಯಾನ್ ಅಕಾಡೆಮಿಯಲ್ಲಿ ಯೋಗ ತರಬೇತಿ ಪಡೆದಿರುವ ವಿದ್ಯಾರ್ಥಿಗಳಾದ ಎಂ. ಇಂಚರಾ, ಎಂ.ಆರ್.ಗೌರವ್ ಹಾಗೂ ಡಿ. ಸಾತ್ವಿಕ್ ಅವರು ಯೋಗಾಸನದಲ್ಲಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಗೊಂಡಿದ್ದಾರೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ದಾಖಲೆ ನಿರ್ಮಿಸಲು ಕಾರಣವಾದ ಯೋಗಾಸನ ಭಂಗಿಗಳನ್ನು ಪ್ರದರ್ಶಿಸಿದರು. ಇಂಚರಾ ಮಾತನಾಡಿ, 12 ವರ್ಷದ ನಾನು ಸುಪ್ತ ವಜ್ಞಾಸನ ಭಂಗಿಯಲ್ಲಿ ಒಂದು ಗಂಟೆ 17 ನಿಮಿಷ 20 ಸೆಕೆಂಡ್ ಇದ್ದದ್ದು ದಾಖಲೆಯಾಗಿದೆ ಎಂದಳು.
ಎಂ.ಆರ್.ಗೌರವ್ ಮಾತನಾಡಿ, 10 ವರ್ಷ ನಾನು ಯೋಗ ನಿದ್ರಾಸನದಲ್ಲಿ 35 ನಿಮಿಷ ಇದ್ದು ದಾಖಲೆ ನಿರ್ಮಿಸಿರುವುದಾಗಿ ಹೇಳಿದರೆ, ಡಿ. ಸಾತ್ವಿಕ್ ಬದ್ಧ ಪದ್ಮಾಸನದಲ್ಲಿ 40 ನಿಮಿಷ 15 ಸೆಕೆಂಡ್ ಕಾಲ ಇದ್ದು ದಾಖಲೆ ನಿರ್ಮಿಸಿದ್ದಾಗಿ ಹೇಳಿದರು.