ಯೋಗಪಟು ಪುಂಡಲೀಕಗೆ ರಾಜ್ಯಮಟ್ಟದ ಪ್ರಶಸ್ತಿ

24BTG1
Published on

ಬೆಟಗೇರಿ: ಗ್ರಾಮದ ಯೋಗ ಸಾಧಕ ಪುಂಡಲೀಕ ಲಕಾಟಿ ಅವರಿಗೆ ಯೋಗಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ರಾಜ್ಯಮಟ್ಟದ ಕೆಳದಿ ರಾಣಿ ಚನ್ನಮ್ಮ ಪ್ರಶಸ್ತಿ ನೀಡಲಾಗಿದೆ.

ವಿಜಯಪುರ ಜಿಲ್ಲೆಯ ಉತ್ನಾಳದ ಚನ್ನಮ್ಮ ವಿದ್ಯಾವರ್ಧಕ ಸಂಸ್ಥೆ, ಅಖಿಲ ಕರ್ನಾಟಕ ಪಂಚಮಸಾಲಿ ಪರಿಷತ್, ಅಖಿಲ ಭಾರತೀಯ ಪಂಚಮಸಾಲಿ ಪರಿಷತ್ ಮತ್ತು ಮಲ್ಲಸರ್ಜ ದೇಸಾಯಿ ಅಂತಾರಾಷ್ಟ್ರೀಯ ಕ್ರೀಡಾ ತರಬೇತಿ ಕೇಂದ್ರ, ಬೆಳವಡಿ ಮಲ್ಲಮ್ಮ ದೈಹಿಕ ಮತ್ತು ಸೈನಿಕರ ತರಬೇತಿ ಕೇಂದ್ರದ ಸಹಯೋಗದಲ್ಲಿ ವಿಜಯಪುರ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆ ಆಶ್ರಮದಲ್ಲಿ ಬುಧವಾರ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಸದ್ಯ ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವಿಭಾಗದಲ್ಲಿ ಜಿಲ್ಲಾ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net