ಉಡುಪಿ ಮಠಕ್ಕೆ ಯೋಗಗುರು ಸ್ವಾಮಿ ರಾಮದೇವ

New Udupi Matha
Published on

ಹುಬ್ಬಳ್ಳಿ : ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಅ. 24, 25 ಮತ್ತು 26ರಂದು ನಡೆಯುವ ಅಖಿಲ ಭಾರತೀಯ ಓರಿಯೆಂಟಲ್ ಕಾನ್ಪರೆನ್ಸ್ ಕಾರ್ಯಕ್ರಮದ ಪೂರ್ವ ತಯಾರಿ ಕುರಿತು ಉಡುಪಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರೊಂದಿಗೆ ಪತಂಜಲಿ ಯೋಗ ಪೀಠದ ಕರ್ನಾಟಕ ಪ್ರಭಾರಿ ಭವರಲಾಲ್ ಆರ್ಯ ಅವರು ರ್ಚಚಿಸಿದರು.

ಉಡುಪಿ ಪರ್ಯುಯ ಶ್ರೀ ಪುತ್ತಿಗೆ ಮಠ, ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ ಮತ್ತು ದೆಹಲಿಯ ಸೆಂಟ್ರಲ್ ಸಂಸ್ಕೃತ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಪತಂಜಲಿ ಯೋಗ ಪೀಠದ ಹರಿದ್ವಾರದ ಸಂಸ್ಥಾಪಕರಾದ ಯೋಗ ಗುರು ಸ್ವಾಮೀ ರಾಮದೇವ ಮಹಾರಾಜರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಭವರಲಾಲ್ ಆರ್ಯ ತಿಳಿಸಿದ್ದಾರೆ. ಉಡುಪಿ ಶ್ರೀ ಮಠದ ವತಿಯಿಂದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಭವರಲಾಲ್ ಆರ್ಯ ಅವರನ್ನು ಸನ್ಮಾನಿಸಿ, ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net