

ದೇವದುರ್ಗ: ಯೋಗ ಭಾರತದ ಪುರಾತನ ವ್ಯಾಯಾಮ ಪದ್ಧತಿಯಾಗಿದ್ದು, ನಿತ್ಯ ಅಭ್ಯಾಸ ಮಾಡುವುದರಿಂದ ರೋಗ ದೂರವಾಗಲಿದೆ. ಯೋಗ ಜಗತ್ತಿಗೆ ಭಾರತ ನೀಡಿದ ಅತ್ಯುತ್ತಮ ಕೊಡುಗೆಯಾಗಿದೆ ಎಂದು ಪಿಐ ಎಸ್.ಮಂಜುನಾಥ ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ತಾಲೂಕಿನ ಅಂಜಳದ ಐತಿಹಾಸಿಕ ಬೆಟ್ಟದಲ್ಲಿ ಪೊಲೀಸ್ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.
ನಿತ್ಯ ಯೋಗ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ಯೋಗ ಮಾಡುವುದು ರೂಢಿಸಿಕೊಳ್ಳಬೇಕು. ಪೊಲೀಸ್ ನೌಕರರು ನಿತ್ಯ ಒತ್ತಡದ ಜೀವನ ಹಾಗೂ ಕೆಲಸ ನಿಮಿತ್ತ ಆರೋಗ್ಯದ ಕಡೆ ಗಮನಹರಿಸಲು ಆಗಲ್ಲ. ನಿತ್ಯ ಅರ್ಧಗಂಟೆ ಯೋಗ ಮಾಡುವುದರಿಂದ ಸದೃಢ ದೇಹ ಪಡೆಯಬಹುದು. ಯೋಗಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿನಿತ್ಯ ಮನೆ, ಶಾಲೆಗಳಲ್ಲಿ ಆಚರಣೆ ಮಾಡಬೇಕು.ಯೋಗ ನಮ್ಮ ಪೂರ್ವಜನರು ನಮಗೆ ನೀಡಿದ ಅದ್ಭುತ ವರವಾಗಿದೆ ಎಂದರು.
ನೌಕರರಾದ ಮೆಹಬೂಬ್ ಪಾಷಾ, ವೀರೇಶ, ಮರಸಣ್ಣ ವಗ್ಗರ್, ದೇವರಾಜ ಬಾಬು, ಗಂಗಾಧರ್, ರಾಘವೇಂದ್ರ, ಹನುಮಂತ, ಚನ್ನಪ್ಪ, ಶಿವಕುಮಾರ ಚವ್ಹಾಣ್, ರಾಜೇಶ, ಪ್ರಭು, ಮೋಹನ್ ಇತರರಿದ್ದರು.