

ಮಂಡ್ಯ: ನಡೆದಾಡುವ ಗ್ರಂಥಾಲಯ ಪ್ರೊ.ಎಂ.ಕರೀಮುದ್ದಿನ್ ಬಗ್ಗೆ ರಚಿಸಲಾಗಿರುವ ‘ಗಂಜಾಂ ಪ್ರೊ.ಎಂ.ಕರೀಮುದ್ದಿನ್ ಸಂಸ್ಮರಣ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಜ.30ರಂದು ಸಂಜೆ 4.30ಕ್ಕೆ ಶ್ರೀರಂಗಪಟ್ಟಣದ ಓಂ ಶ್ರೀನಿಕೇತನ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಸಾಹಿತಿ, ಯೋಗ ಶಿಕ್ಷಕ ಅಪ್ಪಾಜಿ ತಿಳಿಸಿದರು.
ಕರೀಮುದ್ದಿನ್ ಅವರ ಬಾಲ್ಯಾವಸ್ಥೆ, ಶೈಕ್ಷಣಿಕ, ವೃತ್ತಿಪರ, ವಿಚಾರ, ಚಿಂತನೆಗಳು ಹಾಗೂ ಅವರ ಜೀವನ ಆಧಾರಿತ ಗ್ರಂಥವಾಗಿದೆ. ಅವರ ಜೀವನದ ಮಾಹಿತಿ ನೀಡುವ 200 ಪುಟ ಒಳಗೊಂಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೈಸೂರು ಕುವೆಂಪು ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಪಿ.ಕೆ.ರಾಜಶೇಖರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಮೈಸೂರು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಉದ್ಘಾಟಿಸುವರು. ಶಾಸಕ ರಮೇಶ ಬಂಡಿಸಿದ್ದೇಗೌಡ ಪುಸ್ತಕ ಬಿಡುಗಡೆ ಮಾಡುವರು. ಹಿರಿಯ ವಕೀಲ ಎಂ.ಪುಟ್ಟೇಗೌಡ ಅವರು ಕರೀಮುದ್ದಿನ್ ಕುರಿತು ಮಾತನಾಡಲಿದ್ದಾರೆ ಎಂದರು.
ಡಾ.ಕೆ.ವೈ.ಶ್ರೀನಿವಾಸ್, ಜಯಶಂಕರ್, ಎಸ್.ಎಂ.ಶಿವಕುಮಾರ್ ಇದ್ದರು.