ಯೋಗಕ್ಷೇತ್ರದಲ್ಲಿ ತನುಶ್ರೀ ಸಾಧನೆ ಮಾದರಿ

udp-6-tanusri
Published on

ಉಡುಪಿ: ಹೆತ್ತವರು ಮತ್ತು ಗುರುಗಳ ಆಶೀರ್ವಾದವಿದ್ದರೆ ಮಾತ್ರ ಸಾಧನೆ ಸಾಧ್ಯ. ಯೋಗಕ್ಷೇತ್ರದಲ್ಲಿ ಕೀರ್ತಿ ಗೌರವ ಬೆಳೆಸುವ ಕೆಲಸವನ್ನು ಮಾಡಿರುವ ತನುಶ್ರೀ ಪಿತ್ರೋಡಿ ಮಾದರಿಯಾಗಿದ್ದಾರೆ ಎಂದು ಶಾಸಕ ಯಶ್​ ಪಾಲ್​ ಸುವರ್ಣ ಹೇಳಿದರು.

ಬುಧವಾರ ಸೈಂಟ್​ ಸಿಸಿಲೀಸ್​ ಸಭಾಂಗಣದಲ್ಲಿ ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಅವರ ಎರಡನೇ ಗಿನ್ನೆಸ್​ ದಾಖಲೆಯ ಪ್ರಮಾಣ ಪತ್ರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಸಹಕಾರಿ ಯೂನಿಯನ್​ ಜಿಲ್ಲಾಧ್ಯಕ್ಷ ಜಯಕರ್​ ಶೆಟ್ಟಿ ಇಂದ್ರಾಳಿ , ಗುರು ರಾಮಕೃಷ್ಣ್ಣ ಕೊಡಂಚ, ಅಭಿನಯಾ ಅಧ್ಯಕ್ಷ ಉಮೇಶ್​ ಅಲೆವೂರು , ಸರಿತಾ , ಸಿಸ್ಟರ್​ ತೆರೆಸಾ ಜ್ಯೋತಿ, ದೈಹಿಕ ಶಿಕ್ಷಣ ಶಿಕ್ಷಕ ದಿನೇಶ್​, ವಿಜಯ್​ ಕೋಟ್ಯಾನ್​ , ಕೃಷ್ಣ ಕುಲಾಲ್​ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗುರುವಂದನೆ ಕಾರ್ಯಕ್ರಮ ನಡೆಯಿತು. ಯುವ ಬರಹಗಾರ ಧೀರಜ್​ ಬೆಳ್ಳಾರೆ ಕಾರ್ಯಕ್ರಮ ನಿರ್ವಹಿಸಿದರು. ಸಂಧ್ಯಾ ಉದಯ್​ ಮತ್ತು ರೀತುಶ್ರೀ ಕಾರ್ಯಕ್ರಮ ಆಯೋಜಿಸಿದ್ದರು.

2023 ಜುಲೈನಲ್ಲಿ ಮೋಸ್ಟ್​ ಬ್ಯಾಕ್ವರ್ಡ್​ ಸ್ಟೆಪ್ಸ್​ ಇನ್​ ಒನ್​ ಮಿನಿಟ್​ ಯೋಗಪ್ರದರ್ಶನದಲ್ಲಿ ದೇಹದ ಹಿಂಭಾಗಕ್ಕೆ ಎರಡೂ ಕೈಗಳನ್ನಿಟ್ಟು ಪಾದವನ್ನು ಸುತ್ತುವರಿದು ಮತ್ತೆ ಮುಂಭಾಗಕ್ಕೆ ಬರುವ ಭಂಗಿಯನ್ನು ತನುಶ್ರೀ ಒಂದು ನಿಮಿಷದಲ್ಲಿ 53 ಬಾರಿ ಮಾಡಿದ್ದರು. ಆ ಸಾಧನೆಯನ್ನು ಗಿನ್ನೆಸ್​ ಸಂಸ್ಥೆ ಪರಿಶೀಲಿಸಿ ಪ್ರಮಾಣ ಪತ್ರ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net