

ಗಜೇಂದ್ರಗಡ: ರೋಗದಿಂದ ಮುಕ್ತರಾಗಲು ಹಾಗೂ ಆರೋಗ್ಯಯುತ ಜೀವನ ನಡೆಸಲು ನಿತ್ಯವೂ ಯೋಗ ಮಾಡಬೇಕು ಎಂದು ಯೋಗ ತರಬೇತುದಾರ, ಪತಂಜಲಿ ಯೋಗ ಸಮಿತಿ ಸಂಚಾಲಕ ಪ್ರಕಾಶ ಬಾಕಳೆ ಹೇಳಿದರು.
ಪಟ್ಟಣದ ಪುರ್ತಗೇರಿ ಕ್ರಾಸ್ ಬಳಿಯ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಮತ್ತು ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಹಾಗೂ ಪಿ.ಯು ಕಾಲೇಜ್ ಸಹಯೋಗದಲ್ಲಿ ಶುಕ್ರವಾರ ಏರ್ಪಾಟಾಗಿದ್ದ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.
ಯೋಗ ದೇಶದ ಪ್ರಾಚೀನ ಪದ್ಧತಿಯಾಗಿದೆ. ಯೋಗದ ಮಹತ್ವವನ್ನು ಇಡೀ ವಿಶ್ವವೇ ಅರಿತುಕೊಂಡಿದೆ. ಅತ್ಯುತ್ತಮ ಆರೋಗ್ಯ, ರೋಗಗಳಿಂದ ದೂರವಿರಲು ಯೋಗ ಸಹಕಾರಿಯಾಗಿದೆ ಎಂದರು.
ಪಿಯು ಪ್ರಾಚಾರ್ಯ ಸಂಗಮೇಶ ಬಾಗೂರ ಮಾತನಾಡಿ, ಧಾವಂತ, ಒತ್ತಡದ ಕಾಲದಲ್ಲಿ ಮನುಷ್ಯನ ಮನಸು ವಿಕಾರವಾಗಿ, ಖಿನ್ನತೆಗೆ ಒಳಗಾಗುತ್ತಿದ್ದಾನೆ ದೇಹ, ಮನಸನ್ನು ಸುಸ್ಥಿಯಲ್ಲಿಡಲು ಯೋಗದಿಂದ ಮಾತ್ರ ಸಾಧ್ಯ ಎಂದರು.
ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕವಿತಾ ಪಾಟೀಲ, ಹುತ್ತಪ್ಪ ಮಾರನಬಸರಿ, ಅಶೋಕ ಅಂಗಡಿ, ವೀರೇಶ ಕುದರಿ, ಆನಂದ ಜೂಚನಿ, ಮಲ್ಲನಗೌಡ ಗೌಡರ, ಶಾರದಾ ಅಂಬೋರೆ, ಶಿವಕುಮಾರ ಕೋಸಗಿ, ಈರಣ್ಣ ಮಲಕಣ್ಣವರ, ಫಾತಿಮಾ ಖುದ್ದಣ್ಣವರ, ಇತರರಿದ್ದರು.