

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಡಿಸೆಂಬರ್ನಲ್ಲಿ ಏರ್ಪಡಿಸಲಾಗಿರುವ ವಿಶ್ವ ಯೋಗ ಸಮ್ಮೇಳನ 2023ರ ಅಂಗವಾಗಿ ಇಲ್ಲಿಯ ವಿದ್ಯಾನಗರದ ಬಿವಿಬಿ ಕ್ಯಾಂಪಸ್ನಲ್ಲಿರುವ ಸ್ಪೋರ್ಟ್ಸ್ ಅರೆನಾದಲ್ಲಿ ನ. 26ರಂದು ಬೆಳಗ್ಗೆ 6.30ಕ್ಕೆ ಪೂರ್ವ ಸಿದ್ಧತಾ ಸಭೆ ಆಯೋಜಿಸಲಾಗಿದೆ.
ರೋಟರಿ ಬೆಂಗಳೂರು ಯೋಗ ಕ್ಲಬ್, ಸ್ವಾಮಿ ವಿವೇಕಾನಂದ ಯೋಗ ಸಂಶೋಧನಾ ಮತ್ತು ಸಮಗ್ರ ಆರೋಗ್ಯ ಟ್ರಸ್ಟ್, ಯುನಿವಸಿರ್ಟಿ ಆ್ ಅಮೆರಿಕಾಸ್ ಆಶ್ರಯದಲ್ಲಿ ಗ್ಲೋಬಲ್ ಯೋಗ ಸಮ್ಮೀಟ್ ಆಯೋಜಿಸಲಾಗಿದೆ. ಇದರ ತಯಾರಿ ಕುರಿತು ಸಭೆಯಲ್ಲಿ ಚಚಿರ್ಸಲಾಗುವುದು.
ಗ್ಲೋಬಲ್ ಯೋಗಾ ಸಮ್ಮಿಟ್ ಚೇರ್ಮನ್ ಹಾಗೂ ರೋಟರಿ ಕ್ಲಬ್ ಹಿಂದಿನ ಗವರ್ನರ್ ಬಿ.ಎಲ್. ನಾಗೇಂದ್ರ ಪ್ರಸಾದ, ಅಮೆರಿಕದ ಯೋಗಾ ಯುನಿವಸಿರ್ಟಿ ಹೋಲಿಸ್ಟಿಕ್ ಹೆಲ್ತ್ ಡಿಪಾರ್ಟಮೆಂಟ್ನ ನಿರ್ದೇಶಕ, ಹೋಲಿಸ್ಟಿಕ್ ಹೀಲಿಂಗ್ ಥೆರಪಿಸ್ಟ್ ಡಾ. ದಣಾಮೂತಿರ್, ಯೋಗ ಶಿಕ್ಷಕ ವಿನಯಕುಮಾರ ಎಸ್., ಯೋಗ ಕ್ಲಬ್ ಕಾರ್ಯದಶಿರ್ ವಿಜಯಕುಮಾರ, ರವಿ ಅವರು ಪಾಲ್ಗೊಳ್ಳುವರು.
40ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವೈದ್ಯರು, ಯೋಗ ಗುರುಗಳು, ವೇದ ತಜ್ಞರು, ಶಿಕ್ಷಣ ತಜ್ಞರು ಯೋಗ ಸಮ್ಮೀಟ್ನಲ್ಲಿ ಭಾಗವಹಿಸಲಿದ್ದಾರೆ. ಪರಿಣಿತ ತಜ್ಞರಿಂದ ಪ್ರತಿನಿಧಿಗಳಿಗೆ ಉಚಿತವಾಗಿ ಅನೇಕ ಔಷಧ ರಹಿತ ಚಿಕಿತ್ಸೆಗಳು ಮತ್ತು ಸಮಾಲೋಚನೆಗಳು ನಡೆಯಲಿವೆ.
100ಕ್ಕೂ ಅಧಿಕ ವೈಜ್ಞಾನಿಕ ಸಂಶೋಧನಾ ಪ್ರಬಂಧಗಳ ಮಂಡನೆಯಾಗಲಿವೆ. 40 ಶ್ರೇಷ್ಠ ಭಾಷಣಕಾರರು, 125 ಪೂರ್ವ ಸಮ್ಮೇಳನ ಪ್ರವರ್ತಕರು, ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಗುರುಗಳೊಂದಿಗೆ ಸಂವಾದ ನಡೆಯಲಿದೆ.
ಯೋಗಿ, ಮಾತು, ಅಂತಾರಾಷ್ಟ್ರೀಯ ಯೋಗ ಪ್ರದರ್ಶನ , ಎಲ್ಲ ಆಧ್ಯಾತ್ಮಿಕ ಗುರುಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಯೋಗ ಸಿಗಲಿದೆ. ಉಚಿತವಾಗಿ ಯೋಗ ಮತ್ತು ಸಮಗ್ರ ಆರೋಗ್ಯ ಚಿಕಿತ್ಸೆ ಸಲಹೆಗಳನ್ನು ಪ್ರತಿನಿಧಿಗಳಿಗೆ ನೀಡಲಾಗುವುದು.
ಅಗ್ನಿಹೋತ್ರ, ಸೂರ್ಯ ನಮಸ್ಕಾರ, ಲಲಿತ ಸಹಸ್ರನಾಮ, ವಿಷ್ಣು ಸಹಸ್ರನಾಮ, ಸೌಂದರ್ಯ ಲಹರಿ, ಮಹಾ ಮೃತ್ಯುಂಜಯ ಮಂತ್ರ, ಭಗವದ್ಗೀತೆ, ಮಂತ್ರಗಳನ್ನು ಮಾನಸಿಕ ನೆಮ್ಮದಿಗಾಗಿ ಪಠಣ ಮಾಡಲಾಗುವುದು.
"ಮಾನಸಿಕ ಆರೋಗ್ಯಕ್ಕಾಗಿ ಯೋಗ' ಶೀಷಿರ್ಕೆಯಡಿ ಸಮ್ಮೇಳನ ನಡೆಯಲಿದ್ದು, ಮಂಡಿ ನೋವು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಬೆನ್ನು ನೋವು ಮುಂತಾದ ಕಾಯಿಲೆಗಳಿಗೆ ಚಿಕಿತ್ಸೆಗಳನ್ನು ತಿಳಿಸಿಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.