ಯೋಗದಿಂದ ದೇಹ, ಮನಸ್ಸು ಸದೃಢ

21 SARAG 1
ಸರಗೂರು ತಾಲೂಕಿನ ಪಟ್ಟಣದ ಲಯನ್ಸ್ ಅಕಾಡೆಮಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
Published on

ಸರಗೂರು: ಯೋಗವು ಭಾರತದಲ್ಲಿ ಹುಟ್ಟಿ ಪ್ರಪಂಚಾದ್ಯಂತ ಇಂದು ಹರಡಿದೆ ಎಂದು ಲಯನ್ಸ್ ಅಕಾಡೆಮಿ ಶಾಲೆಯ ಪ್ರಾಂಶುಪಾಲ ದಾಸಾಚಾರ್ ತಿಳಿಸಿದರು.

ಪಟ್ಟಣದ ಲಯನ್ಸ್ ಅಕಾಡೆಮಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಗದಿಂದ ದೇಹ ಮತ್ತು ಮನಸ್ಸು ಎರಡೂ ಸದೃಢವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ನಿತ್ಯ ಯೋಗಾಭ್ಯಾಸ ಮಾಡಲೇಬೇಕು. ಇದರಿಂದ ಯಾವ ಕಾಯಿಲೆಯು ಕೂಡ ಮನುಷ್ಯನಿಗೆ ಸುಳಿಯಲಾರದು ಎಂದು ಸಲಹೆ ನೀಡಿದರು.

ಲಯನ್ಸ್ ಅಕಾಡೆಮಿ ಶಾಲೆಯ ಮುಖ್ಯಶಿಕ್ಷಕಿ ಪದ್ಮಶ್ರೀ, ದೈಹಿಕ ಶಿಕ್ಷಣ ಶಿಕ್ಷಕ ವಿಜಯ್ ಕುಮಾರ್, ಸಹಶಿಕ್ಷಕರೂ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net