ಮೈಸೂರಿನಲ್ಲಿ ಯೋಗ ಸ್ಪರ್ಧೆ

yoga sports in mysore
Published on

ಮೈಸೂರು: ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಮೈಸೂರು ವಿಶ್ವ ವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್‌ನ ಯೋಗ ಭವನದಲ್ಲಿ ಭಾನುವಾರ ಯೋಗಾಸನ ಕ್ರೀಡೆ ಸ್ಪರ್ಧೆ ನಡೆಯಿತು.

ಸ್ಪರ್ಧೆ ಉದ್ಘಾಟಿಸಿದ 92.7 ಬಿಗ್ ಎಫ್‌ಎಂ ಆರ್‌ಜೆ ಅವಿನಾಶ್ ಮಾತನಾಡಿ, ಯೋಗಾಸನದಿಂದ ನಮ್ಮ ಆರೋಗ್ಯ ವೃದ್ಧಿಸುವ ಜತೆಗೆ ಸದಾ ನಮ್ಮ ಮನಸ್ಸನ್ನು ಸಂತಸದಲ್ಲಿಡಲು ಸಹಕಾರಿಯಾಗಿದೆ ಎಂದರು.

ಮೈಸೂರು ವಿಶ್ವ ವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿವೆಂಕಟೇಶ್ ಮಾತನಾಡಿ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲೂ ಯೋಗ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದರು.

ಸಂಸ್ಥೆಯ ಖಜಾಂಚಿ ಜಯಪ್ರಕಾಶ್, ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಯೋಗ ಥೆರಪಿ ಮ್ತು ಕೌನ್ಸೆಲಿಂಗ್ ವಿಭಾಗದ ಮುಖ್ಯಸ್ಥ ಡಾ.ಎಂ.ವಿ. ಜಯರೇವಣ್ಣ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net