ಯೋಗದಿಂದ ಒತ್ತಡ, ಆತಂಕ, ಖಿನ್ನತೆ ಮಾಯ

24 ALVANDI 01
ಅಳವಂಡಿ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಯೋಗ ತರಬೇತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಿಆರ್‌ಪಿ ವಿಜಯಕುಮಾರ, ಹಿರಿಯ ಶಿಕ್ಷಕ ಹನುಮಂತ, ಶಿಕ್ಷಕರಾದ ನೀಲಪ್ಪ, ಅಂಬರೀಶ, ಪರಶುರಾಮ, ವಾಸವಿ, ಸಂಪಕ್ಕ, ಗಾಯತ್ರಿ ಇತರರಿದ್ದರು.
Published on

ಅಳವಂಡಿ: ಯೋಗವು ಸದೃಢ ದೇಹ ಹಾಗೂ ಮಾನಸಿಕ ಆರೋಗ್ಯ ಹೊಂದಲು ಸಹಕಾರಿಯಾಗಿದೆ ಎಂದು ಸಿಆರ್‌ಪಿ ವಿಜಯಕುಮಾರ ಟಿಕಾರೆ ತಿಳಿಸಿದರು. ಗ್ರಾಮದ ಶ್ರೀಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಯೋಗ ಶಿಬಿರಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.

ಓದಿಗೆ ಮಕ್ಕಳ ಮನಸ್ಸು ಶಾಂತವಾಗಿರಬೇಕು. ನಿತ್ಯ ಸ್ವಲ್ಪ ಸಮಯ ಯೋಗಕ್ಕೆ ಮೀಸಲಿಟ್ಟರೆ ಒತ್ತಡ, ಆತಂಕ, ಖಿನ್ನತೆ ಪ್ರಮಾಣ ಕಡಿಮೆಯಾಗಲಿದೆ. ಸಕಾರಾತ್ಮಕ ಮನೋಭಾವ ಹೆಚ್ಚಲಿದೆ ಜತೆಗೆ ಶಿಸ್ತು, ತಾಳ್ಮೆಯ ಗುಣ ಬೆಳೆಯಲಿದೆ ಎಂದರು.

ಹಿರಿಯ ಶಿಕ್ಷಕ ಎಚ್.ಎನ್.ಲಮಾಣಿ ಮಾತನಾಡಿ, ಯೋಗದಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ. ಯೋಗದ ವಿಶೇಷ ತರಬೇತಿ ಜತೆಗೆ ಮಕ್ಕಳಿಗೆ ಪ್ರತಿ ಶನಿವಾರ ಯೋಗ ಹಾಗೂ ಧ್ಯಾನದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net