ಯಕ್ಕುಂಡಿ ಶಾಲೆಯಲ್ಲಿ ಯೋಗ ಕಾರ್ಯಕ್ರಮ

Yoga Program at Yakkundi School
ಯಕ್ಕುಂಡಿ ಗ್ರಾಮದ ಜಗಜ್ಯೋತಿ ಬಸವೇಶ್ವರ ಆಂಗ್ಲ ಮಾಧ್ಯಮ ಪಬ್ಲಿಕ್​ ಶಾಲೆಯಲ್ಲಿ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಲ್ಲೇಶ ಯಮನಪ್ಪ ನ್ಯಾಮಗೌಡ, ರಾಜಶೇಖರ ಜಂಬಗಿ, ವೀರೇಶಗೌಡ ಬಿರಾದಾರ ಮತ್ತಿತರರಿದ್ದರು.
Published on

ವಿಜಯಪುರ: ತಾಲೂಕಿನ ಯಕ್ಕುಂಡಿ ಗ್ರಾಮದ ಶ್ರೀ ಜಗಜ್ಯೋತಿ ಬಸವೇಶ್ವರ ಆಂಗ್ಲ ಮಾಧ್ಯಮ ಪಬ್ಲಿಕ್​ ಶಾಲೆಯಲ್ಲಿ ನವಭಾರತ ಫೌಂಡೇಷನ್​ ವಿಜಯಪುರ ಮತ್ತು ವೀರೇಶ ಫಿಲ್ಮ್​ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಬುಧವಾರ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಾಲೆಯ ಮಲ್ಲೇಶ ಯಮನಪ್ಪ ನ್ಯಾಮಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಹಣಮಂತ ಯಕ್ಕುಂಡಿ, ಸಿದರಾಯ ನ್ಯಾಮಗೌಡ, ಮಲಕಾರಿ ಒಡೆಯರ್​, ಗಾಯತ್ರಿ ಒಡೆಯರ್​, ನವಭಾರತ ಫೌಂಡೇಷನ್​ ಅಧ್ಯಕ್ಷ ರಾಜಶೇಖರ ಜಂಬಗಿ, ವೀರೇಶಗೌಡ ಬಿರಾದಾರ ಮತ್ತು ಅಂತಾರಾಷ್ಟ್ರೀಯ ಯೋಗಪಟು ಎಂ.ಪಿ. ದೊಡಮನಿ ಉಪಸ್ಥಿತರಿದ್ದರು.

ನವಭಾರತ ಫೌಂಡೇಷನ್​ ವತಿಯಿಂದ ಮಲ್ಲೇಶ ನ್ಯಾಮಗೌಡ ಅವರಿಗೆ ಯೋಗ ಪೋಷಣಾ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಲ್ಲಿಕಾರ್ಜುನ ದಳವಾಯಿ ನಿರೂಪಿಸಿದರು. ಶ್ರೀಕಾಂತ ಮಂಗಾನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net