ಸರ್ವರೋಗಕ್ಕೆ ಯೋಗ ರಾಮಬಾಣ

21 YLB 02
ಯಲಬುರ್ಗಾದಲ್ಲಿ ಉಚಿತ ಯೋಗಾಭ್ಯಾಸ ಹಾಗೂ ನಿಸರ್ಗ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಪತಂಜಲಿ ಯೋಗ ಸಮಿತಿ ತಾಲೂಕು ಪ್ರಭಾರ ಸಂಗಣ್ಣ ತೆಂಗಿನಕಾಯಿ, ಯೋಗ ಗುರುಗಳಾದ ವೀರೇಶ ಗುರೂಜಿ, ಓಂಕಾರೇಶ್ವರಿ ಮಾತಾಜಿ ಇತರರಿದ್ದರು.
Published on

ಯಲಬುರ್ಗಾ: ಕೆಲಸದ ಒತ್ತಡ, ಜೀವನ ಶೈಲಿ ಬದಲಾವಣೆಯಿಂದ ಮನುಷ್ಯ ಅನಾರೋಗ್ಯಕ್ಕೆ ಈಡಾಗುತ್ತಿದ್ದಾನೆ ಎಂದು ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಖಾಸಗಿ ಪ್ಯಾಲೇಸ್ ಆವರಣದಲ್ಲಿ ಪತಂಜಲಿ ಯೋಗ ಸಮಿತಿ, ಕಪ್ಪತ್ತಗುಡ್ಡದ ಬಸವ ಪತಂಜಲಿ ಯೋಗ ಸಮಿತಿ, ಬಸವಲಿಂಗೇಶ್ವರ ಯೋಗ ತರಬೇತಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 10 ದಿನಗಳ ಉಚಿತ ಯೋಗಧ್ಯಾನ ಪ್ರಾಣಾಯಾಮ ಹಾಗೂ ನಿಸರ್ಗ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಎಲ್ಲ ರೋಗಗಳ ನಿವಾರಣೆಗೆ ಯೋಗ ರಾಮಬಾಣವಾಗಿದೆ. ಪ್ರತಿಯೊಬ್ಬರೂ ನಿತ್ಯ ಯೋಗ, ಪ್ರಾಣಾಯಾಮ ಮಾಡುವುದರಿಂದ ಸಕಾರಾತ್ಮಕ ಚಿಂತನೆ, ಕ್ರಿಯಾಶೀಲತೆ ಹೆಚ್ಚುತ್ತದೆ. ಯೋಗದಿಂದ ದೇಹಕ್ಕೆ ಅನೇಕ ಲಾಭಗಳಿರುವುದರಿಂದ ಪಟ್ಟಣದ ನಿವಾಸಿಗಳು ಶಿಬಿರದಲ್ಲಿ ಪಾಲ್ಗೋಳ್ಳಬೇಕು ಎಂದರು.

ಪತಂಜಲಿ ಯೋಗ ಸಮಿತಿ ತಾಲೂಕು ಪ್ರಭಾರ ಸಂಗಣ್ಣ ತೆಂಗಿನಕಾಯಿ ಮಾತನಾಡಿ, ಒತ್ತಡದ ಜೀವನಕ್ಕೆ ಯೋಗ ಅವಶ್ಯವಿದೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಸಾರ್ವಜನಿಕರು ಹತ್ತು ದಿನಗಳ ಯೋಗ ಶಿಬಿರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವೀರೇಶ ಗುರೂಜಿ ಹಾಗೂ ಗುರುಮಾತೆ ಓಂಕಾರೇಶ್ವರಿ ಮಾತಾಜಿ ಯೋಗ ಮತ್ತು ನಿಸರ್ಗ ಚಿಕಿತ್ಸಾ ಶಿಬಿರದಲ್ಲಿ ಯೋಗಾಭ್ಯಾಸ ನೆಡೆಸಿಕೊಟ್ಟರು.

ಪ್ರಮುಖರಾದ ಪರಶುರಾಮ ಹೊಸ್ಮನಿ, ಬಸವರಾಜ ಹಳ್ಳಿ, ಬಸವರಾಜ ಕೊಂಡಗುರಿ, ಫಕೀರಪ್ಪ ಗಾಣಿಗೇರ, ಮಂಜುನಾಥ ನಿಂಗೊಜಿ, ಸಿದ್ದಯ್ಯ ಕೊಣ್ಣೂರ, ಎಂ.ಎನ್.ಜನಾದ್ರಿ, ವಿ.ಬಿ.ಹನುಮಶೆಟ್ಟಿ, ರೇಖಾ ಹೊಸ್ಮನಿ, ಸರೋಜಾ ಗೌಡರ, ಲೀಲಾ ಮುಳಗುಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net