ಜನಜಾಗೃತಿಗಾಗಿ ಯೋಗ ನಡಿಗೆ

IMG-20240616-WA0019.jpg
Published on

ಹುಬ್ಬಳ್ಳಿ: ಇಲ್ಲಿಯ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗ ಸ್ಪರ್ಶ ಪ್ರತಿಷ್ಠಾನ ವತಿಯಿಂದ ಹಾಗೂ ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದೊಂದಿಗೆ ಭಾನುವಾರ ಯೋಗ ನಡಿಗೆ ಹಮ್ಮಿಕೊಳ್ಳಲಾಯಿತು.

ಸಾಮಾಜಿಕ ಸ್ವಾಸ್ಥ್ಯ, ಯೋಗದ ಮಹತ್ವ ಮತ್ತು ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜನ ಜಾಗೃತಿ ಮೂಡಿಸಲು ಭಾನುವಾರ ಸಂಜೆ ಇಲ್ಲಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಿಂದ ನಡಿಗೆ ಪ್ರಾರಂಭಿಸಿ ಚೆನ್ನಮ್ಮ ವೃತ್ತ, ಕೊಪ್ಪಿಕರ್ ರಸ್ತೆ, ಮರಾಠಾ ಗಲ್ಲಿ, ತುಳಜಾಭವಾನಿ ದೇವಸ್ಥಾನ, ದಾಜಿಬಾನ ಪೇಟೆ, ಸಂಗೊಳ್ಳಿ ರಾಯಣ್ಣ ವೃತ್ತದ ಮುಖಾಂತರ ಮರಳಿ ಕಲ್ಯಾಣ ಮಂಟಪಕ್ಕೆ ಬರಲಾಯಿತು.

ಸಮಿತಿಯ ಯೋಗ ಬಂಧುಗಳು "ಯೋಗದಿಂದ ರೋಗ ಮುಕ್ತ, ಯೋಗ ಉಚಿತ ಆರೋಗ್ಯ ಖಚಿತ, ಎಲ್ಲರೂ ಯೋಗಕ್ಕೆ ಬನ್ನಿ' ಎಂದು ಘೋಷಣೆಗಳನ್ನು ಕೂಗುತ್ತ ಜಾಗೃತಿ ಮೂಡಿಸಿದರು.

ಸಂಚಾಲಕರಾದ ಅನಿಲ ಲದವಾ, ಸ್ನೇಹ ಬಾಡಗಿ, ಎಸ್ಪಿವೈಎಸ್ಎಸ್ ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಜೋಶಿ-, ಯೋಗಸ್ಪರ್ಶ ಪ್ರತಿಷ್ಠಾನ ಅಧ್ಯಕ್ಷ ದಯಾನಂದ ಮಗಜಿಕೊಂಡಿ, ಸುಧಾಕರ ಶೆಟ್ಟಿ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net