

ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ವಿಶ್ವದರ್ಶನ ಸೇವಾ ಹಾಗೂ ಓಂಕಾರ ಯೋಗ ಕೇಂದ್ರದ ಆಶ್ರಯದಲ್ಲಿ ಆರೋಗ್ಯ ಭಾಗ್ಯಕ್ಕಾಗಿ ಯೋಗ ಮುದ್ರೆ ಹಾಗೂ ಸಂಗೀತ ಚಿಕಿತ್ಸೆ ಪ್ರಾಯೋಗಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕೊಳಲು ವಾದಕ ನಾಗರಾಜ ಹೆಗಡೆ ಶಿರನಾಲಾ ಹಾಗೂ ಯೋಗ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಕಾರ್ಯಕ್ರಮ ನಡೆಸಿಕೊಟ್ಟರು. ಯೋಗ ಮುದ್ರೆ ಹಾಗೂ ಧ್ಯಾನದ ಜೊತೆಗೆ ಕೊಳಲು ನಾದದ ಮೂಲಕ ನಮ್ಮ ನಿತ್ಯ ಜೀವನದಲ್ಲಿನ ಒತ್ತಡ, ತಲೆನೋವು, ನಿದ್ರಾಹೀನತೆ, ಬಿಪಿ, ಹೃದ್ರೋಗ ಹಾಗೂ ಸಕ್ಕರೆ ಕಾಯಿಲೆಯಂತಹ ಮುಂತಾದ ರೋಗಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ವಿವರಿಸಿದರು.
ಶಿಕ್ಷಕಿ ಗಾಯತ್ರಿ ಸುಬ್ರಾಯ ಭಟ್ಟ, ಶಿಕ್ಷಕ ಸದಾನಂದ ದಬಗಾರ ಹಾಗೂ ಇತರರು ಅನುಭವ ಹಂಚಿಕೊಂಡರು.