ಯೋಗ, ಧ್ಯಾನದಿಂದ ಒತ್ತಡ ನಿವಾರಣೆ

23KAGWAD1
Published on

ಕಾಗವಾಡ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ದೈಹಿಕ ವ್ಯಾಯಾಮ, ಯೋಗ, ಧ್ಯಾನ ಮತ್ತು ಸಕಾರಾತ್ಮಕ ಚಿಂತನೆಯಿಂದ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ ಎಂದು ನಿರ್ಮಲ ಆಸ್ಪತ್ರೆಯ ವೈದ್ಯ ಡಾ.ಚಂದ್ರಶೇಖರ ಹಳಿಂಗಳೆ ಹೇಳಿದರು.

ಮಹಾರಾಷ್ಟ್ರದ ತಾಸಗಾಂವನ ತುರಚಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಪೊಲೀಸರಿಗೆ ಒತ್ತಡ ರಹಿತ ಜೀವನ ಶೈಲಿ ಅಳವಡಿಸಿಕೊಳ್ಳುವ ಮತ್ತು ಒತ್ತಡ ನಿಯಂತ್ರಣದ ಕುರಿತು ಈಚೆಗೆ ಹಮ್ಮಿಕೊಂಡಿದ್ದ ವಿಶೇಷ ಮಾರ್ಗದರ್ಶನ ಶಿಬಿರದಲ್ಲಿ ಅವರು ಮಾತನಾಡಿದರು.

ವೃತ್ತಿಪರ ಜೀವನ ಮತ್ತು ಕೌಟುಂಬಿಕ ಜೀವನವನ್ನು ಸಮತೋಲನಗೊಳಿಸುವ ಪ್ರಾಮುಖ್ಯತೆ ಕುರಿತು ತಿಳಿಸಿದರು. ಡಾ.ನಿಶಾ ಹಳಿಂಗಳೆ, ಪೊಲೀಸ್ ತರಬೇತಿ ಕೇಂದ್ರದ ನಿರೀಕ್ಷಕ ಹಿಮ್ಮತ ಮಾನೆಪಾಟೀಲ, ರೇಷ್ಮಾ ಮುಲಾನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net