

ಶಿರೋಳ: ಯೋಗದ ಮೂಲಕ ರೋಗ ನಿವಾರಣೆಯಾಗಿ ಮನುಷ್ಯನಲ್ಲಿ ಪರಿವರ್ತನೆ ತರುತ್ತದೆ ಎಂದು ನರಗುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಹೇಳಿದರು.
ಹಂಪಸಾಗರ ಪರ್ವತ ಮರಿದೇವರ ಸ್ಮಾರಕ ಯೋಗ ವ್ಯಾಯಾಮ ಮತ್ತು ಕ್ರೀಡಾ ಸಂಘ ಹಾಗೂ ಬಿ.ಎಂ. ಪಾಟೀಲ ಪ್ರೌಢಶಾಲೆ ಶಿರೋಳ ಸಹಯೋಗದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಭಾರತ ವಿಶ್ವಕ್ಕೆ ಯೋಗದ ಕೊಡುಗೆ ನೀಡಿದೆ. ವಿದೇಶಿಗರು ಯೋಗದ ಕಡೆ ವಾಲುತ್ತಿದ್ದಾರೆ. ಯೋಗ ಕಲಿಸಲು ಭಾರತ ಶಿಕ್ಷಕರಿಗೆ ಆಹ್ವಾನ ನೀಡುತ್ತಿರುವುದು ಶ್ಲಾಘನೀಯ ಎಂದರು.
ತಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶಗೌಡ್ರ ತಿರಕನಗೌಡ್ರ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಮಹಾದೇವಿ ಸೊಬರದ, ಉಪಾಧ್ಯಕ್ಷ ಈಶ್ವರಗೌಡ ತಿರಕನಗೌಡ್ರ, ಗುರುಲಿಂಗನಗೌಡ ಪಾಟೀಲ, ಎಸ್.ಎನ್. ತಿರಕನಗೌಡ್ರ, ದ್ಯಾಮಣ್ಣ ಕಾಡಪ್ಪನವರ, ಆರ್.ಟಿ. ಬನ್ನಿಗಿಡದ, ಹನಮಂತಗೌಡ್ರ ತಿರಕನಗೌಡ್ರ, ಲೋಕಪ್ಪ ಕರಕಿಕಟ್ಟಿ, ಬಾಲಪ್ಪ ಮೂಲಿಮನಿ, ಟಿ.ಎಂ. ನೀಲನ್ನವರ ಇತರರಿದ್ದರು. ಯೋಗ ಶಿಕ್ಷಕರಾದ ವಿನಾಯಕ ಶಾಲದಾರ, ಶರಣಯ್ಯ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.