ಮನಸ್ಸನ್ನು ಬೆಸೆಯುವ ವಿಜ್ಞಾನವೇ ಯೋಗ

Published on

ಚಿಂತಾಮಣಿ: ಮನಸ್ಸು ಮತ್ತು ದೇಹದ ನರನಾಡಿಗಳನ್ನು ಬೆಸೆಯುವ ವಿಜ್ಞಾನವೇ ಯೋಗ ಎಂದು ಆರ್.ಕೆ. ವಿಷನ್ ವಿದ್ಯಾಸಂಸ್ಥೆ ಕಾರ್ಯದಶಿ ಕೆ.ಆರ್. ಪ್ರೇಮಲತಾ ತಿಳಿಸಿದರು.

ನಗರದ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿ, ಯಾಂತ್ರಿಕ ಜೀವನದಲ್ಲಿ ವಯಸ್ಸಿನ ಮಿತಿ ಇಲ್ಲದೆ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟದ ವಿಷಯವಾಗಿದೆ. ಯೋಗದ ಮೂಲಕ ದೇಹವನ್ನು ದಂಡಿಸಿ ಆರೋಗ್ಯ ಪಡೆದುಕೊಳ್ಳಬೇಕು ಎಂದರು.

ಸಂಸ್ಥೆಯ ನಿರ್ದೇಶಕ ಜಿ.ವಿ.ಕೆ. ರೆಡ್ಡಿ, ಆಡಳಿತ ಮಂಡಳಿಯ ತನುಶ್ರೀ, ವರುಣ್, ಪ್ರಾಂಶುಪಾಲರು, ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net