ಯೋಗ ಭಾರತದ ತವರುಮನೆ

gld 28-1
ಗುಳೇದಗುಡ್ಡದಲ್ಲಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ನಿಜಗುಣಾನಂದ ಶ್ರೀಗಳು ಪ್ರವಚನ ನೀಡಿದರು.
Published on

ಗುಳೇದಗುಡ್ಡ: ಈ ದೇಶದಲ್ಲಿ ಅನೇಕ ರೀತಿಯ ಸಾಧನೆಗಳು ಹುಟ್ಟಿವೆ. ಅದರಲ್ಲೂ ಅಪರೂಪದ ಸಾಧನೆ ಅಂದರೆ ಅವು ಯೋಗಗಳು. ಯೋಗ ಭಾರತದ ತವರು ಮನೆ ಎಂದು ಮುಂಡರಗಿಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು ಹೇಳಿದರು.

ಸ್ಥಳೀಯ ಗುರುಸಿದ್ಧೇಶ್ವರ ಬೃಹನ್ಮಠದ ಆವರಣದಲ್ಲಿ ಗುರುಸಿದ್ಧೇಶ್ವರ ಸ್ವಾಮಿಗಳ ಪುಣ್ಯಸ್ಮರಣೆಯ ಶರಣಸಂಗಮ ಹಾಗೂ ಪಟ್ಟಾಧಿಕಾರ ಸಮಾರಂಭದ ಅಂಗವಾಗಿ ಗುರುವಾರ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಶ್ರೇಷ್ಠ ಸಾಧನೆ ಮಾಡಿದೆ. ಅಲ್ಲಿನ ವಾತಾವರಣ ನಮ್ಮ ಬದುಕನ್ನು ಹಿಸುಕಿ ಹಾಕಿದೆ. ಆದರೆ, ಭಾರತ ಹಾಗಲ್ಲ. ಭಾರತ ಮಣ್ಣಿನ ಕಣವು ಮನುಷ್ಯನಿಗೆ ಶಾಂತಿ ಕಲಿಸುತ್ತದೆ. ಭಾರತೀಯರಾದ ನಾವು ಅತ್ಯಂತ ಭಾಗ್ಯಶಾಲಿಗಳು. ಯೋಗ ಪಡೆದು ಯೋಗಿಗಳಾಗಿದ್ದೇವೆ. ಅದಕ್ಕೆ ಭಾರತ ಭಾಗ್ಯವಿಧಾತ ಎಂದು ರವೀಂದ್ರನಾಥ ಠಾಕೂರ ಹೇಳಿದರು.

ಭಾರತದಲ್ಲಿ ಅಧ್ಯಾತ್ಮ ಮತ್ತು ಧರ್ಮ ಮನುಷ್ಯನನ್ನು ವಿಶಾಲಗೊಳಿಸಿದೆ. ಇಲ್ಲಿನ ಅಧ್ಯಾತ್ಮ ಮನುಷ್ಯಗೆ ಒಲಿದರೆ ಆತ ಕ್ರೂರಿಯಾಗುವುದಿಲ್ಲ. ಇದರಲ್ಲಿ ಉಪಾಸನಾ ವಿಧಾನವಿದೆ. ಆತ್ಮಕ್ಕೆ ಸಂಸ್ಕಾರವಿಲ್ಲ. ಮನುಷ್ಯನ ಭಾವಕ್ಕೆ ಒಳ್ಳೆಯ ಸಂಸ್ಕಾರ ಸಿಕ್ಕರೆ ಆ ಮನುಷ್ಯ ಶಾಂತಿಪ್ರಿಯನಾಗಿ ಈ ಜಗಕ್ಕೆ ಶಾಂತಿಧೂತನಾಗುತ್ತಾನೆ. ಹಾಗಾಗಿ ಭಾರತ ಜಗತ್ತಿಗೆ ಎಲ್ಲವನ್ನೂ ಕೊಟ್ಟು ವಿಶಾಲತೆ ಸಾಧಿಸಿದೆ. ಭಕ್ತಿ ಸಹಜವಾದ ಯೋಗ. ಇದನ್ನು ಎಲ್ಲರೂ ಸಹಜವಾಗಿ ಮಾಡಬಹುದು. ಇದು ಮನುಷ್ಯನ ದೇಹಕ್ಕೆ, ಆತ್ಮಕ್ಕೆ ಅತ್ಯಂತ ಶ್ರೇಷ್ಠ ಯೋಗವೆನಿಸಿದೆ. ಇದು ಭಕ್ತಿ ಕಲಿಸಲು ದೊಡ್ಡ ಯೋಗ ಕೊಟ್ಟವರೆಂದರೆ ಅದು ಬಸವಣ್ಣನವರು. ಅದಕ್ಕಾಗಿ ಬಸವಣ್ಣನಿಗೆ ಭಕ್ತಿ ಭಂಡಾರಿ ಎಂದರು.

ಶ್ರೀಮಠದ ಬಸವರಾಜ ಪಟ್ಟದಾರ್ಯ ಸ್ವಾಮಿಗಳು, ಗುರುಬಸವ ದೇವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net