ಬದುಕು ಕಟ್ಟಿಕೊಡುವ ಅತ್ಯುನ್ನತ ಸಾಧನ ಯೋಗ

19MDG1 JAATA
Published on

ಮುಂಡರಗಿ: ಯೋಗ ಕೇವಲ ಆಸನವಲ್ಲ, ಅದು ನಮ್ಮ ಬದುಕನ್ನು ಕಟ್ಟಿಕೊಡುವ ಅತ್ಯುನ್ನತ ಸಾಧನ. ಇಂಗ್ಲಿಷ್ ಔಷಧ ಮತ್ತು ಆಯುರ್ವೆದ ಔಷಧಿಯಿಂದ ಗುಣಪಡಿಸಲಾಗದಂತ ಹಲವಾರು ರೋಗಗಳನ್ನು ಯೋಗದಿಂದ ಸರಿಪಡಿಸಬಹುದು ಎಂದು ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.


ಪಟ್ಟಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ತಾಲೂಕು ಆಡಳಿತ, ವಿವಿಧ ಇಲಾಖೆ, ಪತಂಜಲಿ ಯೋಗ ಸಮಿತಿ, ಹಿಮಾಲಯ ಯೋಗ ಸಮಿತಿ, ಅನ್ಮೋಲ್ ಯೋಗ ಕೇಂದ್ರ, ಚೈತನ್ಯ ಶೈಕ್ಷಣಿಕ ಸಂಸ್ಥೆ, ಅನ್ನದಾನೀಶ್ವರ ವಿದ್ಯಾ ಸಮಿತಿ, ವಿವೇಕ ಜಾಗೃತ ಬಳಗ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.


ಯೋಗಿಗಳಾಗಬೇಕೆಂದರೆ ಯಾವುದೋ ಒಂದು ದಿನಕ್ಕೆ ಯೋಗ ಆಚರಿಸಿದರೆ ಅದು ಸಾಧ್ಯವಾಗುವುದಿಲ್ಲ. ನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು. ನಮ್ಮ ದೇಹದ ಆರೋಗ್ಯ ಸ್ವಾಸ್ಥ್ಯ ಇದ್ದಾಗ ಮನಸ್ಸು ಸಹ ಸ್ವಾಸ್ಥ್ಯಂದಿರುತ್ತದೆ. ಮನಸು ಸರಿ ಇದ್ದರೆ ಒಳ್ಳೆಯ ರೀತಿಯಲ್ಲಿ ವಿಚಾರ ಚಿಂತನೆ ಮಾಡಬಹುದು ಎಂದರು.


ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಜಾಥಾಗೆ ಚಾಲನೆ ನೀಡಿದರು. ಮಠದಿಂದ ಹೊರಟ ಜಾಥಾ ಮುಖ್ಯಬಜಾರ, ಬಸ್ ನಿಲ್ದಾಣ, ಕನಕದಾಸ ವೃತ್ತದ ಮೂಲಕ ಹೇಮರಡ್ಡಿ ಮಲ್ಲಮ್ಮ ವೃತ್ತ ತಲುಪಿತು. ಬಿಇಒ ಎಚ್.ಎಂ. ಫಡ್ನೇಶಿ, ಬಸವಣ್ಣೆಪ್ಪ, ಡಾ.ಪಿ.ಬಿ. ಹಿರೇಗೌಡ್ರ, ಮಂಜುನಾಥ ಇಟಗಿ, ನಾಗೇಶ ಹುಬ್ಬಳ್ಳಿ, ಮಂಜುನಾಥ ಅಳವಂಡಿ, ಮಂಜುಳಾ ಇಟಗಿ, ಮಂಗಳಾ ಸಜ್ಜನರ, ವೀಣಾ ಪಾಟೀಲ, ಶಾಂತಾ ಇಮ್ರಾಪೂರ, ನೀತಾ ಕಂಚಗಾರ, ಬಿ.ಆರ್. ಕುಲಕರ್ಣಿ, ಡಿ. ಪ್ರಕಾಶ, ಡಾ. ಸಚಿನ್ ಉಪ್ಪಾರ, ಕಾಶಿನಾಥ ಶಿರಬಡಗಿ, ಜಗದೀಶ ಸೋನಿ, ನಾರಾಯಣಪ್ಪ ಗುಬ್ಬಿ, ಚಂದ್ರು ಅಳವಂಡಿ, ರವಿ ಪಾಟೀಲ, ಲಕ್ಷ್ಮವ್ವ ಜಕ್ಕಲಿ, ಲಕ್ಷ್ಮೀ ಗುಬ್ಬಿ, ಪ್ರೇಮಾ ಇಲ್ಲೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net