ಮನಸ್ಸನ್ನು ಶಾಂತಗೊಳಿಸುವ ಕ್ರಿಯೆಯೇ ಯೋಗ; ಪದ್ಮಶ್ರೀ ಡಾ.ಎಚ್.ಆರ್.ನಾಗೇಂದ್ರ ಅಭಿಮತ

Vyas
Published on

ಬೆಂಗಳೂರು : ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ. ಬದಲಾಗಿ ಮನಸ್ಸನ್ನು ಶಾಂತಗೊಳಿಸುವ ಕ್ರಿಯೆ ಎಂದು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (ಎಸ್-ವ್ಯಾಸ) ಸ್ವಾಯತ್ತ ವಿಶ್ವ ವಿದ್ಯಾಲಯದ ಕುಲಪತಿ ಪದ್ಮಶ್ರೀ ಡಾ.ಎಚ್.ಆರ್.ನಾಗೇಂದ್ರ ಹೇಳಿದ್ದಾರೆ.

ಜಿಗಣಿಯಲ್ಲಿರುವ ಎಸ್-ವ್ಯಾಸ ಕ್ಯಾಂಪಸ್ಸಿನಲ್ಲಿ ಬ್ಯೂರೋ ಆ್ ಇಂಡಿಯನ್ ಸ್ಟಾೃಂಡರ್ಡ್ಸ್ (ಬಿಐಎಸ್) ಸಹಯೋಗದಲ್ಲಿ ಆಯೋಜಿಸಿದ್ದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಮನಃ ಪ್ರಶಮ್ನೋಪಾಯೋ ಯೋಗ ಇತ್ಯಭಿಧೀಯತೇ’ ಎಂಬ ಸಂಸ್ಕೃತ ಶ್ಲೋಕದ ಪ್ರಕಾರ ಯೋಗ ಮನಸ್ಸನ್ನು ಶಾಂತಗೊಳಿಸಿ ದೇಹವನ್ನು ಶುದ್ಧಗೊಳಿಸುತ್ತದೆ. ಯೋಗದ ನಿಜವಾದ ಪ್ರಯೋಜನವೇ ಮನಸ್ಸನ್ನು ಶುದ್ಧ ಮತ್ತು ಶಾಂತಗೊಳಿಸುವುದು ಎಂದು ಅವರು ವಿವರಿಸಿದರು.

ಬಿಐಎಸ್ ಬೆಂಗಳೂರು ಶಾಖೆಯ ಸಹಯೋಗದೊಂದಿಗೆ ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಎಂಬ ಪರಿಕಲ್ಪನೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಐಎಸ್‌ನ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ 2500ಕ್ಕೂ ಹೆಚ್ಚು ಜನ ಪಾಲ್ಗೊಂಡು ಮನಸ್ಸಿನ ಸಮತೋಲನ ಸ್ಥಿತಿಯನ್ನು ಹೊಂದುವ ಬಗೆಯನ್ನು ಯೋಗದ ಮೂಲಕ ತಿಳಿದುಕೊಂಡರು.

ಕಾರ್ಯಕ್ರಮದಲ್ಲಿ ಬಿಐಎಸ್ ನಿರ್ದೇಶಕರಾದ ನರೇಂದ್ರ ರೆಡ್ಡಿ ಬೀಸು, ಜೈನ್ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ರಾಜ್ ಸಿಂಗ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನೇತ್ರಾವತಿ ಎಸ್, ಎಸ್-ವಿವೈಎಎಸ್‌ಎ ಕುಲಸಚಿವ ಪ್ರೊ.ಎಸ್.ಶಿವಶಂಕರ ಸಾಯಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net