ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ

2 mbl 3
Published on

ಮುಳಬಾಗಿಲು: ಎಲ್ಲವೂ ಕಲ್ಮಶವಾಗಿರುವ ಈಗಿನ ಕಾಲದಲ್ಲಿ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಮಾನವ ಯೋಗ, ಧ್ಯಾನ, ಪ್ರಾಣಾಯಾಮಗಳ ಮೂಲಕ ವೈಯಕ್ತಿಕ ಹಾಗೂ ಸಾಮಾಜಿಕ ಜೀವನ ಉತ್ತಮಪಡಿಸಿಕೊಳ್ಳಬೇಕು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ಕರೆ ನೀಡಿದರು.

ತಾಲೂಕಿನ ಯಳಗೊಂಡಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವಯೋಗ ವಿದ್ಯಾ ಟ್ರಸ್ಟ್​ ಮತ್ತು ರಿಷಿ ಸಾಧಕ್​ ಸೇವಾ ಟ್ರಸ್ಟ್​ನಿಂದ ಶನಿವಾರ ಹಮ್ಮಿಕೊಂಡಿದ್ದ ಸೈಕಲ್​ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅವಶ್ಯ ಉಳ್ಳುವರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಸೇವೆ ನೀಡುವ ಮೂಲಕ ಸಮಾಜಕ್ಕೆ ಟ್ರಸ್ಟ್​ ಮಾರ್ಗದರ್ಶಿಯಾಗಿದೆ. ರಚನಾತ್ಮಕ ಸೇವಾ ಕಾರ್ಯಕ್ರಮಗಳು ತಾಲೂಕಿನಲ್ಲಿ ಇನ್ನೂ ಹೆಚ್ಚಿಗೆ ನೀಡಲಿ ಎಂದರು.

ವಿಶ್ವ ಯೋಗ ವಿದ್ಯಾ ಟ್ರಸ್ಟ್​ನ ಸ್ಥಾಪಕ ಶ್ರೀ ರಾಜೇಶ್​ ಗುರೂಜಿ ಮಾತನಾಡಿ, ಬೈಸಿಕಲ್​ ವಿತರಣೆ ವಿದ್ಯಾರ್ಥಿಗಳ ಶೈಕ್ಷಣಿಕ ಅವಕಾಶಗಳನ್ನು ವಿಸ್ತರಿಸಬೇಕು ಹಾಗೂ ಬೈಸಿಕಲ್​ ಪಡೆದ ಎಲ್ಲ ಮಕ್ಕಳು ಮುಂದಿನ ಜೀವನದಲ್ಲಿ 10 ಮಕ್ಕಳಿಗೆ ಬೈಸಿಕಲ್​ ನೀಡುವಂತಹ ಶಕ್ತಿ, ಮಾನಸಿಕ ಸ್ಥೆ$್ಥರ್ಯ ಬೆಳೆಸಿಕೊಳ್ಳಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಧ್ಯಾನ, ಪ್ರಾಣಾಯಾಮ ಹಾಗೂ ಯೋಗಭ್ಯಾಸ ಮಾಡುವುದರಿಂದ ಅವರ ಸ್ಮರಣಶಕ್ತಿ, ಏಕಾಗ್ರತೆ ಹೆಚ್ಚಾಗುತ್ತದೆ. ಆದ್ದರಿಂದ ಉತ್ತಮ ಫಲಿತಾಂಶ ಸಾಧಿಸಬಹುದು ಎಂದರು.

ಜೆಡಿಎಸ್​ ಮುಖಂಡರಾದ ಯಡಹಳ್ಳಿ ವೈ.ಸೋಮಶೇಖರ್​, ಬಂಡಹಳ್ಳಿ ಲಕ್ಷಿ$್ಮನಾರಾಯಣ್​, ಶಂಕರ್​, ಕಾಡೇನಹಳ್ಳಿ ಅಶೋಕ್​, ಕೀಲುಹೊಳಲಿ ಚಂಗಲರಾಯಪ್ಪ, ಹರೀಶ್​, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶಪ್ಪ, ಯಳಗೊಂಡಹಳ್ಳಿ ಕೃಷ್ಣಕುಮಾರ್​, ಬಾಬು, ಪಿಡಿಒ ಎಸ್​.ರಮೇಶ್​, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಪಿ. ಸೋಮೇಶ್​, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಆನಂದ್​, ಜೆಡಿಎಸ್​ ಮುಖಂಡ ದೊಡ್ಡ ಮುನಿಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net