ಉತ್ತಮ ಆರೋಗ್ಯಕ್ಕೆ ಯೋಗ ಅವಶ್ಯ

24-klg 4
Published on

ಕಲಘಟಗಿ: ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಪ್ರತಿನಿತ್ಯ ಯೋಗ ಮಾಡುವುದರಿಂದ ಮನುಷ್ಯನ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ. ಇದರಿಂದ ಪಂಚೇಂದ್ರಿಯಗಳ ನಿಯಂತ್ರಣ ಹೊಂದಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಉಪನ್ಯಾಸಕ ಡಾ.ಜಗದೀಶ ಎಂ. ಹೇಳಿದರು.

ಪಟ್ಟಣದ ಹನ್ನೆರೆಡು ಮಠದ ಸಭಾಭವನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿವೇಕಾನಂದ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯೋಗ ಶಿಕ್ಷಕಿ ವಿಜಯಲಕ್ಷ್ಮೀ ಐಹೊಳೆ ಮಾತನಾಡಿ, ಪ್ರತಿಯೊಬ್ಬ ಮನಷ್ಯನು ಸಂಪೂರ್ಣ ಆರೋಗ್ಯದಿಂದಿರಲು ತಮ್ಮ ಜೀವನದಲ್ಲಿ ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದು ತೀರಾ ಅವಶ್ಯಕವಾಗಿದೆ ಎಂದರು.

ಹನ್ನೆರಡುಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಾನಪದ ವಿದ್ವಾಂಸ ಮಲ್ಲಯ್ಯಸ್ವಾಮಿ ತೋಟಗಂಟಿ, ನಿವೃತ್ತ ಮುಖ್ಯೋಪಾಧ್ಯಾಯ ಎಚ್.ಎನ್. ಸುಣಗದ, ತಾ.ಪಂ. ಮಾಜಿ ಅಧ್ಯಕ್ಷ ಫಕ್ಕೀರೇಶ ನೇಸರೇಕರ, ಸಂಗಮೇಶ ತೋಟಗಂಟಿ, ಸದಾನಂದ ಚಿಂತಾಮಣಿ, ಪ್ರದೀಪ, ಶ್ರೀಕಾಂತ ಪಾಟೀಲ, ಕಿರಣ ಭಟ್, ರಾಘವೇಂದ್ರ ಹುಲಿಹೊಂಡ, ಶ್ರೀಧರ ದ್ಯಾವಪ್ಪನವರ, ಸುಷ್ಮಿತಾ ಶೀಲಿ, ಭುವನೇಶ್ವರಿ ನೀಲಿ, ಲಕ್ಷ್ಮೀ ಬಿಸನಳ್ಳಿ, ರಾಜೇಶ್ವರಿ ಶೆಟ್ಟಿ, ರಾಧಿಕಾ ಶೆಟ್ಟಿ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net