ಆರೋಗ್ಯಕರ ಸಮಾಜಕ್ಕೆ ಯೋಗ ಅಗತ್ಯ

21-KGL-1,,,
ಕೊಳ್ಳೇಗಾಲದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿ ರೋಟರಿ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಯೋಗ ದಿನೋತ್ಸವ ಕಾರ್ಯಕ್ರಮದಲ್ಲಿ ಯೋಗ ಪಟುಗಳು ಯೋಗ ಪ್ರದರ್ಶನ ಮಾಡಿದರು.
Published on

ಕೊಳ್ಳೇಗಾಲ: ಆರೋಗ್ಯಕರ ಸಮಾಜಕ್ಕೆ ಯೋಗ ಅತ್ಯಗತ್ಯ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮಾಜಿ ಅಧ್ಯಕ್ಷ ಆನಂದ ರಾಮಶೆಟ್ಟಿ ಹೇಳಿದರು.

ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊಳ್ಳೇಗಾಲದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ರೋಟರಿ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಯೋಗ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಳ್ಳೇಗಾಲದಲ್ಲಿ ಯೋಗ ಮಂದಿರ ನಿರ್ಮಾಣವಾಗಿ 25 ವರ್ಷ ಕಳೆದಿದೆ. ಅಂದಿನಿಂದ ಇಲ್ಲಿಯವರೆವಿಗೆ ನಿರಂತರವಾಗಿ ಯೋಗಾಸನ ಹಾಗೂ ಪ್ರಾಣಾಯಾಮವನ್ನು ಉಚಿತವಾಗಿ ಸಾರ್ವಜನಿಕರಿಗೆ ಹೇಳಿ ಕೊಡಲಾಗುತ್ತಿದೆ. ಅಭ್ಯಾಸದಲ್ಲಿರುವ ಸಮಿತಿಯ ಯೋಗ ಪಟುಗಳು ತಮ್ಮ ಸ್ಮೇಹಿತರು ಹಾಗೂ ಪರಿಚಿತರಿಗೆ ಯೋಗದ ಅರಿವು ಮೂಡಿಸಬೇಕು. ಅವರನ್ನು ಸಮಿತಿಗೆ ಸೇರಿಸಿ ಆರೋಗ್ಯ ಸಿದ್ಧಿಸಿಕೊಳ್ಳುವ ಉತ್ತಮ ಕಾರ್ಯವನ್ನು ಮಾಡಬೇಕಿದೆ ಎಂದು ಸಲಹೆ ನೀಡಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿ ಕೊಳ್ಳೇಗಾಲ ಶಾಖೆ ಸಂಸ್ಥಾಪಕ ಎಚ್.ಎಸ್ ನಟರಾಜನ್ ಮಾತನಾಡಿ, ಯೋಗಾಭ್ಯಾಸ ಮಾಡಿ ಸದೃಢ ದೇಹ ಹಾಗೂ ಆರೋಗ್ಯವನ್ನು ಗಳಿಸಬೇಕಿದೆ. ಯೋಗದ ಅರಿವು ಹೆಚ್ಚಾಗಲಿ, ಅದನ್ನು ಉಳಿಸಿ ಬೆಳೆಸೋಣ. ಸಂಸ್ಕಾರ, ಸಂಘಟನೆ ಹಾಗೂ ಸೇವೆಯನ್ನು ಅಳವಡಿಸಿಕೊಂಡು ಪ್ರತಿಯೊಬ್ಬರೂ ಜೀವನ ನಡೆಸಬೇಕಿದೆ ಎಂದು ಹೇಳಿದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಪಿ.ಮಂಜುನಾಥ್ ಮಾತನಾಡಿ, ವಿಶ್ವವೇ ಯೋಗ ದಿನವನ್ನು ಆಚರಿಸುತ್ತಿದೆ. ಯೋಗ ನಮಗೆ ದಿನದ ಒಂದಷ್ಟು ಸಮಯ ಕಾಯಕ ಆಗಬೇಕಿದೆ. ಕೊಳ್ಳೇಗಾಲದಲ್ಲಿ ಪತಂಜಲಿ ಯೋಗ ಶಿಕ್ಷಣ ಸಭಾಂಗಣದಲ್ಲಿ ನಿತ್ಯ 5.30 ರಿಂದ 7 ಗಂಟೆವರೆಗೆ ಯೋಗ ಅಭ್ಯಾಸ ಹಾಗೂ ಸಂಜೆ 5 ರಿಂದ 6 ಗಂಟೆಯವರೆಗೆ ಮಾತೆಯರಿಗೆ ಅಭ್ಯಾಸ ನಡೆಯುತ್ತದೆ. ಜನರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜು ಕೊಂಗರಹಳ್ಳಿ ಮಾತನಾಡಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗ ಮುಖ್ಯ ಗುರುಗಳಾದ ಎಚ್.ಎಸ್ ಪಶುಪತಿ, ಉಪಾಧ್ಯಕ್ಷ ಕೆ.ಎಸ್. ಜಗದೀಶ್, ಹಿರಿಯ ವಕೀಲ ವೆಂಕಟಾಚಲ, ರೋಟರಿ ಸಂಸ್ಥೆ ಅಧ್ಯಕ್ಷ ಮಹದೇವ, ಯೋಗ ಶಿಕ್ಷಕಿ ಜ್ಯೋತಿ ಇತರರು ಇದ್ದರು.

ಗಮನಸೆಳೆದ ಯೋಗಾಸನ : ಬೆಳಗ್ಗೆ 6 ರಿಂದ 7 ಗಂಟೆವರೆಗೆ ಯೋಗ ಪಟುಗಳು ವಿವಿಧ ಭಂಗಿಗಳ ಯೋಗ ಪ್ರದರ್ಶನ ಮಾಡಿ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net