

ಕೆ.ಆರ್.ಪೇಟೆ: ಸ್ವಾಸ್ಥೃ ಬದುಕಿಗೆ ಯೋಗ ಅತ್ಯಗತ್ಯ ಎಂದು ಕೇಂಬ್ರಿಡ್ಜ್ ಶಾಲೆಯ ಮುಖ್ಯಸ್ಥ ಪಿ.ವಿ.ಶಿವಣ್ಣ ಹೇಳಿದರು.
ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ 11ನೇ ವಿಶ್ವಯೋಗ ದಿನಾಚರಣೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಉತ್ತಮ ಬದುಕಿಗೆ ಯೋಗ ಅತ್ಯಗತ್ಯ. ಪ್ರತಿದಿನ ನಿಯಮಿತ ಯೋಗ ಮಾಡುವುದರಿಂದ ಮನಸ್ಸಿನ ಹಾಗೂ ದೇಹದ ಆರೋಗ್ಯ ಉತ್ತಮಪಡಿಸಿಕೊಳ್ಳಬಹುದು. ಯೋಗದಿಂದ ಉತ್ತಮ ಆರೋಗ್ಯ ಹೊಂದಿ, ಬದುಕಿನಲ್ಲಿ ಉತ್ತಮ ಜೀವನ ನಡೆಸುವುವ ಜತೆಗೆ ಬೌದ್ಧಿಕ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.
ಪಸ್ತುತ ಆಧುನಿಕ ಶೈಲಿಯಿಂದ ಹಾಗೂ ದುಶ್ಚಟಗಳಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ಪ್ರಕೃತಿಯನ್ನು ಅರ್ಥಮಾಡಿಕೊಂಡು ಸಹಜ, ಸರಳವಾಗಿ ಬದುಕಿ ಜತೆಗೆ ತನ್ನಂತೆ ಇತರ ಜೀವಿಗಳಿಗೆ ಬದುಕಲು ಅವಕಾಶ ಕಲ್ಪಿಸಿಕೊಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ, ಆನ್‌ಲೈನ್ ಶಿಕ್ಷಣ ಮತ್ತು ವಿಡಿಯೋ ಗೇಮ್‌ಗಳು ಮಕ್ಕಳನ್ನು ತಂತ್ರಜ್ಞಾನದ ಮೇಲೆ ಅವಲಂಬಿತರನ್ನಾಗಿ ಮಾಡಿವೆ. ಹೀಗಾಗಿ, ಅವರಿಗೆ ಹೊರಾಂಗಣ ಆಟಗಳಿಗೆ ಸಮಯವಿಲ್ಲ. ಆದ್ದರಿಂದ ಬೊಜ್ಜು ಮುಂತಾದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಇದು ಮಕ್ಕಳಲ್ಲಿ ಯೋಗದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಹೊರಾಂಗಣ ಚಟುವಟಿಕೆಗಳ ಕೊರತೆಯನ್ನು ಸರಿದೂಗಿಸಲು, ಮಕ್ಕಳು ಒಳಾಂಗಣದಲ್ಲಿ ಯೋಗವನ್ನು ಅಭ್ಯಾಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಶಾಲೆಯ ಮುಖ್ಯಸ್ಥರಾದ ಪಿ.ವಿ .ರಮೇಶ್, ಪಿ .ಎಸ್. ಚಿರಾಗ್, ಸಿಆರ್‌ಪಿ ಕೇಶವಮೂರ್ತಿ, ಮುಖ್ಯ ಶಿಕ್ಷಕಿ ರಾಹಿಲಾಬಾನು, ಶಿಕ್ಷಕರು, ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.