

ವಿಜಯಪುರ: ನಮ್ಮ ದೇಶದ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ದಾನಮ್ಮದೇವಿ ದೇವಸ್ಥಾನ ಅಧ್ಯಕ್ಷ ಅಪ್ಪು ಇಟ್ಟಂಗಿ ಹೇಳಿದರು.
ಸ್ಥಳಿಯ ಆನಂದ ನಗರ ಬಡಾವಣೆಯ ದಾನಮ್ಮದೇವಿ ದೇವಸ್ಥಾನದಲ್ಲಿ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಇತ್ತೀಚೆಗೆ ಆರಂಭಗೊಂಡ 5 ದಿನಗಳ ಉಚಿತ ಯೋಗ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೂ.21 ರಂದು ವಿಶ್ವದಾದ್ಯಂತ 11ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ನಮ್ಮಲ್ಲಿರುವ ಯೋಗದ ಸಂಸತಿಯನ್ನು ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ಮೂಲಕ ಜನರ ಸ್ವಾಸ್ಥ ಜೀವನಕ್ಕೆ ಯೋಗದ ಪ್ರಯೋಗಗಳ ಕುರಿತು ತಿಳಿಸಲಾಗಿದೆ ಎಂದರು.
ನಿವೃತ ಕಾರ್ಯನಿವಾಹಕ ಅಧಿಕಾರಿ ರವೀಂದ್ರ ಕತ್ತಿ ಉಚಿತ ಯೋಗ ಶಿಬಿರ ಉದ್ಘಾಟಿಸಿದರು. ಭಾರತೀಯ ಯೋಗ ಸಂಸ್ಥಾನದ ಶಿಕ್ಷಕ ಹೀರಾಚಂದ ಗಾಂಧಿ ಯೋಗಾಸನ ಆಸನಗಳನ್ನು ಮತ್ತು ಅದರ ಮಹತ್ವದ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಪತಂಜಲಿ ಯೋಗ ಸಮಿತಿ ಯೋಗ ಶಿಕ್ಷಕಿ ಸಾವಿತ್ರಿ ಮಠ ಮತ್ತು ಪತಂಜಲಿಯ ಶರಣಪ್ಪ ಮಾಟುಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಎಸ್. ಪಾಟೀಲ, ಎಸ್.ಸಿ. ನಂದಿ, ಸಿ.ಐ. ಬಾವಿಕಟ್ಟಿ, ರುದ್ರಗೌಡ ಪಾಟೀಲ, ರವಿ ಸಿಂಹಸನ, ನಾಗರಾಜ ಉಳ್ಳೆ, ಎಂ.ಕೆ. ಬಿರಾದಾರ, ಪ್ರೇಮಾ ನಂದಿ, ಕಮಲಾ ಜುಮನಾಳ, ಗಂಗಾಬಾಯಿ ಸಜ್ಜನ, ಪ್ರೇಮಾ ಮೈದರಗಿ, ಶೋಭಾ, ಮಹಾದೇವಿ ಕೋರಿ ಮತ್ತಿತರರಿದ್ದರು. ಎಚ್.ಎಂ. ಬೋರಾವತ ನಿರೂಪಿಸಿದರು. ಬಸವರಾಜ ಮರನೂರ ವಂದಿಸಿದರು.