ಒತ್ತಡ ನಿರ್ವಹಣೆಗೆ ಯೋಗ ಬೆಸ್ಟ್

h26-kh patil college
Published on

ಹುಬ್ಬಳ್ಳಿ: ಐಎಂಎ ಹುಬ್ಬಳ್ಳಿ ಮಹಿಳಾ ವೈದ್ಯರ ಶಾಖೆಯಿಂದ ಇಲ್ಲಿಯ ವಿದ್ಯಾನಗರದ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್. ಪಾಟೀಲ ಪದವಿಪೂರ್ವ ಕಾಲೇಜ್‌ನಲ್ಲಿ ಶನಿವಾರ ಋತುಚಕ್ರ, ಆರೋಗ್ಯ ನೈರ್ಮಲ್ಯ ಮತ್ತು ಪೋಷಣೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಐಎಂಎ ಹುಬ್ಬಳ್ಳಿ ಮಹಿಳಾ ವೈದ್ಯರ ಶಾಖೆಯ ಖಜಾಂಚಿ ಡಾ. ರೇಣುಕಾ ದುಗಾಣಿ ಮಾತನಾಡಿ, ನಿತ್ಯದ ಜೀವನದಲ್ಲಿ ಒತ್ತಡ ಸಾಮಾನ್ಯವಾಗಿ ಹೋಗಿದೆ. ಇದರಿಂದ ಹೊರಬರಲು ಯೋಗ, ವ್ಯಾಯಾಮ, ಧ್ಯಾನಕ್ಕೆ ಮೊರೆ ಹೋಗಬೇಕು ಎಂದರಲ್ಲದೆ, ದೈನಂದಿನ ಒತ್ತಡ ಕಡಿಮೆ ಮಾಡಿಕೊಳ್ಳಲು ವಿದ್ಯಾರ್ಥಿನಿಯರಿಗೆ ಕೆಲ ಸಲಹೆ ನೀಡಿದರು.

ಡಾ. ಉದಯಶ್ರೀ ವೂರಖಾರ ಮಾತನಾಡಿ, ಋತುಚಕ್ರವು ಮಹಿಳೆಯರ ಆರೋಗ್ಯದ ಒಂದು ಭಾಗ. ಸರಿಯಾದ ಆಹಾರ ಮತ್ತು ನೀರು ಸೇವನೆಯಿಂದ ಋತುಚಕ್ರದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಪ್ರಾಚಾರ್ಯ ಎಸ್.ಬಿ. ಸಣಗೌಡರ, ವಿಜ್ಞಾನ ವಿಭಾಗದ ಸಹ ಸಂಯೋಜಕ ಸಚಿನ ಮಾಚಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net