ಮನಶಾಂತಿಗೆ ಸಹಾಯಕ, ಶಿಕ್ಷಣಕ್ಕೆ ಪೂರಕ ಯೋಗ

yoga
ನರಗುಂದ ಬಾಲಕಿಯರ ಸರ್ಕಾರಿ ಪ್ರೌಡ ಶಾಲೆ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
Published on

ನರಗುಂದ: ಪಟ್ಟಣದ ಬಾಲಕಿಯರ ಸಕಾರ್ರ್ರಿ ಪ್ರೌಢ ಶಾಲೆಯಲ್ಲಿ ತಾಲೂಕಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ನರಗುಂದ: ಪಟ್ಟಣದ ಬಾಲಕಿಯರ ಸಕಾರ್ರ್ರಿ ಪ್ರೌಢ ಶಾಲೆಯಲ್ಲಿ ತಾಲೂಕಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಯೋಗ ಶಿಕ್ಷಣಕ್ಕೆ ಪೂರಕವಾಗಿದೆ. ಶರೀರದ ಗಟ್ಟಿತನಕ್ಕಾಗಿ ಮತ್ತು ಮಾನಸಿಕ ಶಾಂತಿಕಾಪಾಡಲು ಯೋಗ ಮಹತ್ವದ್ದಾಗಿದೆ. ಭಾರತ ಯೋಗಕ್ಕೆ ಹೆಚ್ಚಿನ ಮಹತ್ವ ನೀಡಿದೆ ಎಂದರು.

ಬಿಇಒ ಡಾ. ಗುರುನಾಥ ಹೂಗಾರ ಮಾತನಾಡಿ, ಯೋಗದಿಂದ ಎಲ್ಲರೂ ಉತ್ತಮ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಆಸನ ಹಾಗೂ ಪ್ರಾಣಾಯಾಮ ಮಾಡುವುದರಿಂದ ಏಕಾಗ್ರತೆ ಉಂಟಾಗುತ್ತದೆ ಎಂದರು.

ತಾಲೂಕು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರೇಣುಕಾ ಕೊರವನ್ನವರ ಮಾತನಾಡಿದರು. ಶಿಕ್ಷಣ ಪರಿವೀಕ್ಷಕ ಎನ್.ಆರ್. ನಿಡಗುಂದಿ, ಬಿಆರ್‌ಸಿ ಕೇಂದ್ರದ ಅಧಿಕಾರಿ ಬಿ.ಎಫ್. ಮಜ್ಜಗಿ, ಆರೋಗ್ಯ ಶಿಕ್ಷಣಾಧಿಕಾರಿ ಜಿ. ವಿ. ಕೊಣ್ಣೂರ, ಎಸ್.ಎಚ್. ಹುಬ್ಬಳ್ಳಿ, ಎಸ್.ಆರ್. ಬಮ್ಮನಪಾಡ, ಪಾಂಡು ಗೂಡೂರ, ವೀರಭದ್ರಪ್ಪ ಮೇಲಿನಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net