

ಮೈಸೂರು: ಯೋಗದ ಕುರಿತು ಭವಗದ್ಗೀತೆಯಲ್ಲೂ ಉಲ್ಲೇಖವಿದೆ. ಭವದ್ಗೀತೆಯಲ್ಲಿ ಪುನರ್ಜನ, ಕರ್ಮ, ಯೋಗ ಸೇರಿದಂತೆ ಹಲವು ಅಂಶಗಳು ಪ್ರಸ್ತಾಪವಾಗಿದೆ ಎಂದು ನಗರದ ಸಂಸ್ಕೃತಿ ಪ್ರತಿಷ್ಠಾನ ಮುಖ್ಯಸ್ಥ ಡಾ.ಎಂ.ಎ. ಆಳ್ವಾರ್ ಹೇಳಿದರು.
ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟ ವತಿಯಿಂದ ನಗರದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ರಾಜ್ಯಮಟ್ಟದ ಯೋಗ ಸಮ್ಮೇಳನದಲ್ಲಿ ಭಾನುವಾರ ‘ಭಗವದ್ಗೀತೆಯಲ್ಲಿ ಯೋಗದ ಅನಾವರಣ’ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಭವದ್ಗೀತೆಯಲ್ಲಿ ಯೋಗಾಸನ ಹಾಗೂ ಪ್ರಾಣಾಮಯದ ಕುರಿತು ಏನು ಹೇಳಲಾಗಿದೆ ಎಂದು ಓದಿ ಅಭ್ಯಾಸ ಮಾಡಬೇಕು. ಭಗವದ್ಗೀತೆಯಲ್ಲಿ ಪ್ರಸ್ತಾಪವಾಗಿರುವ ಯೋಗದ ಕುರಿತು ವಿಶೇಷ ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಮಾನಸಿಕ ಹಾಗೂ ದೈಹಿಕ ಅನಾರೋಗ್ಯವನ್ನು ದೂರ ಮಾಡಲು ಯೋಗದ ಅವಶ್ಯಕತೆ ಇದೆ. ಯೋಗ ಇದೀಗ ವಿಶ್ವದಾದ್ಯಂತ ಹರಡಿದ್ದು, ವಿಶ್ವದ ಹಲವಾರು ರಾಷ್ಟ್ರಗಳು ಯೋಗಾಭ್ಯಾಸ ಮಾಡುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.