

ಬೆಳಗಾವಿ: ಯೋಗ ಭಾರತದ ಪರಂಪರೆ ಪ್ರತಿಕ ಎಂದು ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಮೋಹನ ಬಾಗೇವಾಡಿ ಹೇಳಿದರು.
ನಗರದ ದೇವರಾಜ ಅರಸು ಕಾಲೋನಿ ಚಿನ್ನಮ್ಮ ಬಿ.ಹಿರೇಮಠ ವೃದ್ಧಾಶ್ರಮದಲ್ಲಿ ಪತಂಜಲಿ ಯೋಗ ಸಮಿತಿ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿರುವ ಆರು ದಿನಗಳ ವಿಶೇಷ ಯೋಗ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜೂ.16 ರಿಂದ 21ರ ವರೆಗೆ ಪ್ರತಿದಿನ ಬೆಳಿಗ್ಗೆ 5.30ರಿಂದ 7 ಗಂಟೆವರೆಗೆ ನಡೆಯುವ ಶಿಬಿರದ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು.ಯೋಗಾಭ್ಯಾಸದಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಉತ್ತಮ ಆರೋಗ್ಯ ಹೊಂದಬಹುದು ಎಂದು ತಿಳಿಸಿದರು.
ವೃದ್ಧಾಶ್ರಮದ ಸಂಯೋಜಕ ಎಂ.ಎಸ್. ಚೌಗಲ, ಭಾರತ್ ಸ್ವಾಭಿಮಾನ ಟ್ರಸ್ಟ್ ಪುರುಷೋತ್ತಮ್ ಪಟೇಲ್, ಯೋಗ ಶಿಕ ರಮೇಶ ಮಹಡಿಕ್, ರೂಪ ಮಹಡಿಕ್, ನಗರ ಸೇವಕರಾದ ಬಸವರಾಜ್ ಮೋದಗೇರಿ, ಮಹಿಳಾ ಕಲ್ಯಾಣ ಸಂಸ್ಥೆ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲ ಇತರರಿದ್ದರು.