ಜ್ಞಾಪಕ ಶಕ್ತಿ ವೃದ್ಧಿಗೆ ಯೋಗ ಪೂರಕ

Yoga is a supplement to improve memory power.
ಗುಳೇದಗುಡ್ಡ ಸಮೀಪದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅಂಧಸಾಧಕ ಬಸವರಾಜ ಉಮಾರಣಿ ಅವರನ್ನು ಶಾಲೆಯ ವತಿಯಿಂದ ಪ್ರಾಚಾರ್ಯ ಆರ್.ಜಿ. ಪವಾರ ಹಾಗೂ ಶಿಕ್ಷಕರು ಸನ್ಮಾನಿಸಿದರು.
Published on

ಗುಳೇದಗುಡ್ಡ: ಗಣಿತ ಕಬ್ಬಿಣ ಕಡೆಲೆಯಲ್ಲ. ಯಾವುದೆ ವಿಷಯವನ್ನು ಪ್ರೀತಿಸಿದರೆ ಅದು ನಮಗೆ ಸರಳವಾಗುತ್ತದೆ. ಅದೇ ರೀತಿ ಗಣಿತವನ್ನು ಪ್ರೀತಿಸಿದರೆ ಗಣಿತ ಅತ್ಯಂತ ಸರಳವಾಗುತ್ತದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಂಧಸಾಧಕ ಬಸವರಾಜ ಉಮರಾಣಿ ಹೇಳಿದರು.

ಸಮೀಪದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಮಯ ಗೌರವಿಸಬೇಕು. ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ನಿತ್ಯ ಯೋಗ, ಧ್ಯಾನ ಮಾಡಬೇಕು. ಇದರಿಂದ ಆತ್ಮವಿಶ್ವಾಸ, ಏಕಾಗ್ರತೆ ಹೆಚ್ಚುತ್ತದೆ. ಇದು ನಿಮ್ಮ ಸಾಧನೆಗೆ ಸಹಕಾರಿಯಾಗುತ್ತದೆ ಎಂದರು.

ಜೀವನ ಒಂದು ಹೋರಾಟ. ಹೋರಾಟದ ಬದುಕಿನಲ್ಲಿ ಸಾಕಷ್ಟು ಸಮಸ್ಯೆಗಳು ಬರುತ್ತವೆ. ಅಂತಹ ಸಂದರ್ಭದಲ್ಲಿ ಆತ್ಮವಿಶ್ವಾಸದಿಂದ, ಧನಾತ್ಮಕವಾಗಿ ಅವುಗಳನ್ನು ಎದುರಿಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.

ಪ್ರಾಚಾರ್ಯ ಆರ್.ಜಿ. ಪವಾರ, ಸುಧಾ ಹೆಗಡೆ, ಮಲ್ಲಿಕಾರ್ಜುನ ಬಿರಾದಾರ, ಎಚ್.ಬಿ. ನೂರಪ್ಪನವರ, ರಾಜು ನಾಯಕ, ರೂಪಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net