ಮಾನಸಿಕ, ದೈಹಿಕ ಆರೋಗ್ಯಕ್ಕೆ ಯೋಗ ಉತ್ತಮ ಸಾಧನ; ಡಾ.ಕೆ.ವೈಷ್ಣವಿ ಅಭಿಮತ

yoga
Published on

ಬೆಂಗಳೂರು: ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹಾಗೂ ಸರ್ವೋತೋಮುಖ ವ್ಯಕ್ತಿತ್ವದ ಬೆಳವಣಿಗೆಗೆ ಯೋಗ ಒಂದು ಉತ್ತಮ ಸಾಧನವಾಗಿದೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ. ವೈಷ್ಣವಿ ಹೇಳಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಶ್ರೀ ಬಾಲಾಜಿ ವಿದ್ಯಾಪೀಠದ ಸಹಯೋಗದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿದ್ದ Yogic approach to Mental Health ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕರ್ಮಯೋಗದ ಮಹತ್ವವನ್ನು ತಿಳಿಸುವುದರ ಜೊತೆಗೆ ಪ್ರಸ್ತುತ ಕಾರ್ಯಾಗಾರವು ತುಂಬಾ ಅರ್ಥಪೂರ್ಣವಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಅನುಕೂಲವನ್ನು ಪಡೆದುಕೊಳ್ಳಬೇಕು. ವಿಶ್ವವಿದ್ಯಾಲಯವು ಇಂತಹ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಯೋಗ ವಿದ್ಯಾರ್ಥಿಗಳ ಕೌಶಲವನ್ನು ಹೆಚ್ಚಿಸಲು ಪ್ರಯತ್ನಿಸಿದೆ ಎಂದು ವೈಷ್ಣವಿ ಶ್ಲಾಘಿಸಿದರು. ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಇ. ಸುಧೀಂದ್ರ, ಬಾಲಾಜಿ ವಿದ್ಯಾಪೀಠದ ನಿರ್ದೇಶಕ ಪ್ರೊ. ಆನಂದ ಬಾಲಯೋಗಿ ಭವನನ್, ವಿಶ್ವದ್ಯಾಲಯದ ಡೀನ್ ಪ್ರೊ. ವಿ. ಗಿರೀಶ್ ಚಂದ್ರ. ಪ್ರೊ. ಸಿ. ಪಾಲಯ್ಯ ಹಾಗೂ ಪ್ರೊ. ಶಿವಾನಿ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಸುಮಾರು 280 ವಿದ್ಯಾರ್ಥಿಗಳು ಭಾಗವಹಿಸಿದ್ದರು. "ಯೋಗ ಮತ್ತು ಆಯುರ್ವೇದಂತಹ ಭಾರತೀಯ ಪಾರಂಪರಿಕ ವಿದ್ಯೆಗಳ ಮೂಲಕ ಮಾನಸಿಕ ಆರೋಗ್ಯದ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಪರಿಹರಿಸಬಹುದು. ಈ ಕಾರಣಕ್ಕಾಗಿ ಬಾಲಾಜಿ ವಿದ್ಯಾಪೀಠವು ವಿವಿ ಜೊತೆ ಸೇರಿ ಉಪಯುಕ್ತ ಕಾರ್ಯವನ್ನು ಮಾಡಿದೆ."

-ಡಾ. ಅಹಲ್ಯಾ, ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net