ಯೋಗ ಭಾರತೀಯರ ಉತ್ತಮ ಕೊಡುಗೆ

ಕೂಡ್ಲಿಗಿ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಉದ್ಘಾಟಿಸಿದರು. ಯೋಗಮಾತೆ ಬಿ.ಗೌರಮ್ಮ, ಸಿಪಿಐ ಪ್ರಲ್ಹಾದ್ ಆರ್.ಚನ್ನಗಿರಿ, ಪಿಎಸ್‌ಐ ಸಿ.ಪ್ರಕಾಶ್, ಗಾಂಧಿ ಸ್ಮಾರಕ ಸಮಿತಿ ಅಧ್ಯಕ್ಷ ಡಿ.ನಾಗರಾಜ, ಕಸಾಪ ಅಧ್ಯಕ್ಷ ವೀರೇಶ ಅಂಗಡಿ, ಮೈದಾನ ಗೆಳೆಯರ ಬಳಗದ ನಾಗರಾಜ ಕೊಟ್ರಪ್ಪನವರ್, ಜಿಲಾನ್ ಇತರರಿದ್ದರು.

Published on

ಕೂಡ್ಲಿಗಿ: ಯೋಗಾಭ್ಯಾಸದಿಂದ ರೋಗ ದೂರ ಮಾಡಿಕೊಳ್ಳಬಹುದು ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.

ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ಮೈದಾನ ಗೆಳೆಯರ ಬಳಗ, ಪತಂಜಲಿ ಯೋಗ ಸಮಿತಿ, ಗಾಂಧಿ ಸ್ಮಾರಕ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಜಯವಾಣಿ ಪತ್ರಿಕೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಗಾಭ್ಯಾಸ ಆತಂಕ ಮತ್ತು ಖಿನ್ನತೆ ಕಡಿಮೆ ಮಾಡುತ್ತದೆ. ಪ್ರತಿ ದಿನ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ. ಭಾರತದ ಕೊಡುಗೆಯಾದ ಯೋಗ ವಿಶ್ವದಲ್ಲೇ ಪ್ರಸಿದ್ದಿಯಾಗಿದೆ. ಸುಮಾರು 5000 ವರ್ಷಗಳ ಇತಿಹಾಸ ಹೊಂದಿದೆ. ಇತ್ತೀಚೆಗೆ ಪ್ರಚಾರ ಹೆಚ್ಚಾಗಿ ಇಂದು 188 ದೇಶಗಳು ಯೋಗಭ್ಯಾಸ ಮಾಡುತ್ತಿವೆ. ಯೋಗದಿಂದ ಖುಷಿ ಮುನಿಗಳು ನೂರಾರು ವರ್ಷ ಬದುಕುತ್ತಿದ್ದರು. ವೈಜ್ಞಾನಿಕ ಯುಗದಲ್ಲಿ ಯೋಗದಿಂದ ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಿಪಿಐ ಪ್ರಲ್ಹಾದ್ ಆರ್.ಚನ್ನಗಿರಿ, ಪಿಎಸ್‌ಐ ಸಿ.ಪ್ರಕಾಶ್, ಗಾಂಧಿ ಸ್ಮಾರಕ ಸಮಿತಿ ಅಧ್ಯಕ್ಷ ಡಿ.ನಾಗರಾಜ, ಕಸಾಪ ಅಧ್ಯಕ್ಷ ವೀರೇಶ ಅಂಗಡಿ, ಮೈದಾನ ಗೆಳೆಯರ ಬಳಗದ ನಾಗರಾಜ ಕೊಟ್ರಪ್ಪನವರ್, ಶಿಕ್ಷಣ ಸಮನ್ವಯಾಧಿಕಾರಿ ಎಸ್.ಎಸ್.ಜಗದೀಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ದರಾಧ್ಯ, ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net