ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿ

21 ckm 9
ಚಿಕ್ಕಮಗಳೂರು ಹೊರವಲಯದ ಹಿರೇಮಗಳೂರು ಶ್ರೀಕೋದಂಡರಾಮಚAದ್ರ ಸ್ವಾಮಿ ದೇವಾಲಯದ ಆವರಣದಲ್ಲಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದಿಂದ ಅಂತರಾಷ್ಟಿçÃಯ ಯೋಗ ದಿನಾಚರಣೆ ಪ್ರಯುಕ್ತ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಯೋಗಾಭ್ಯಾಸ ನಡೆಸಿದರು.
Published on

ಚಿಕ್ಕಮಗಳೂರು: ನಗರದ ಹಿರೇಮಗಳೂರು ಶ್ರೀಕೋದಂಡರಾಮಚAದ್ರ ಸ್ವಾಮಿ ದೇವಾಲಯದ ಆವರಣದಲ್ಲಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದಿಂದ ಅಂತರಾಷ್ಟಿçÃಯ ಯೋಗ ದಿನಾಚರಣೆ ಪ್ರಯುಕ್ತ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಯೋಗಾಭ್ಯಾಸ ನಡೆಸಿದರು.

ಈ ವೇಳೆ ಮಾತನಾಡಿದ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್, ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗದ ಅವಶ್ಯಕ. ಐದು ಸಾವಿರ ವರ್ಷಗಳ ಪುರಾತನ ಯೋಗ ಕಲೆ ಭಾರತದಲ್ಲಿ ರೂಢಿಯಲ್ಲಿತ್ತು. ಯೋಗವನ್ನು ಇಂದು ಪ್ರಪಂಚದಾದ್ಯAತ ಜನರು ಅಭ್ಯಾಸ ಮಾಡುತ್ತಿದ್ದಾರೆ ಎಂದರು.
ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ಉz್ದೆÃಶದಿಂದ ಪ್ರತಿವರ್ಷ ಅಂತಾರಾಷ್ಟಿçÃಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗವು ವೈಯಕ್ತಿಕ ಆರೋಗ್ಯ ಮಾತ್ರವಲ್ಲದೇ, ಸಾಮಾಜಿಕ ಯೋಗ ಕ್ಷೇಮಕ್ಕೂ ಕೊಡುಗೆ ನೀಡುತ್ತದೆ. ಇದು ವೈಯಕ್ತಿಕ ಮತ್ತು ಸಾಮೂಹಿಕ ಆರೋಗ್ಯದ ಪರಸ್ಪರ ಸಂಬAಧವನ್ನು ಒತ್ತಿಹೇಳುತ್ತದೆ ಎಂದು ಹೇಳಿದರು.
ಅಂತಾರಾಷ್ಟಿçÃಯ ಯೋಗ ದಿನವು ಬಹುಮುಖಿ ಪ್ರಾಮುಖ್ಯವನ್ನು ಹೊಂದಿವೆ. ಯೋಗಾಭ್ಯಾಸ ಮತ್ತು ಅದಕ್ಕೆ ಸಂಬAಧಿತ ಪ್ರಯೋಜನಗಳನ್ನು ಉತ್ತೇಜಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಯೋಗವನ್ನು ವೈಯಕ್ತಿಕ ಬೆಳವಣಿಗೆ ಮತ್ತು ಸಾಮಾಜಿಕ ಸುಧಾರಣೆಗೆ ಸಾಧನವಾಗಿ ಉತ್ತೇಜಿಸುತ್ತದೆ ಎಂದರು.
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ಯೋಗದ ಪ್ರಾಚೀನ ಪರಂಪರೆ ಮತ್ತು ಜಾಗತಿಕ ಆರೋಗ್ಯ ಹಾಗೂ ಶಾಂತಿಯನ್ನು ಉತ್ತೇಜಿಸುವ ಸಾಮರ್ಥ್ಯವಿದೆ. ಆ ನಿಟ್ಟಿನಲ್ಲಿ ನರೇಂದ್ರ ಮೋದಿಯವರು ಜೂನ್ ೨೧ ಅನ್ನು ಅಂತಾರಾಷ್ಟಿçÃಯ ಯೋಗ ದಿನವೆಂದು ಘೋಷಿಸಿ ಯೋಗದ ಪರಂಪರೆಗೆ ಒತ್ತು ನೀಡಿದ್ದಾರೆ ಎಂದು ಹೇಳಿದರು.
ಯೋಗಾಭ್ಯಾಸದಲ್ಲಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮಭರಣ್ಯ, ಜಿಲ್ಲಾ ವಕ್ತಾರ ಎಚ್.ಎಸ್.ಪುಟ್ಟಸ್ವಾಮಿ, ಗ್ರಾಮಾಂತರ ಸಹ ವಕ್ತಾರ ಹಂಪಯ್ಯ, ಮಾಧ್ಯಮ ಪ್ರಮುಖ್ ಕೇಶವಮೂರ್ತಿ, ನಗರ ಮಂಡಲ ಉಪಾಧ್ಯಕ್ಷ ರೇವನಾಥ್, ನಗರ ಎಸ್‌ಸಿ ಮೋರ್ಚಾ ಅಧ್ಯಕ್ಷ ಸಿ.ಆರ್.ಜಗದೀಶ್, ಬೂತ್ ಅಧ್ಯಕ್ಷ ನಂದನ್, ಹಿರಿಯ ಮುಖಂಡರಾದ ರಾಜ್ ಕುಮಾರ, ನರಸಿಂಹಮೂರ್ತಿ, ಶಿವಣ್ಣ, ಅರುಣ್, ಚನ್ನಕೇಶವ, ಗಣೇಶ್, ರೋಹಿತ್, ಧರ್ಮರಾಜು, ನಾಗರಾಜು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net