ನಿರ್ನಾಳ ಗ್ರಂಥಿಗಳ ಸಮತೋಲನಕ್ಕೆ ಯೋಗ ಸಹಕಾರಿ

ಹೊಸಪೇಟೆ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಯೋಗ ತರಬೇತಿ ಶಿಬಿರದಲ್ಲಿ ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಡಾ.ಎಸ್.ಬಿ.ಹಂದ್ರಾಳ ತರಬೇತಿ ನೀಡಿದರು.
ಹೊಸಪೇಟೆ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಯೋಗ ತರಬೇತಿ ಶಿಬಿರದಲ್ಲಿ ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಡಾ.ಎಸ್.ಬಿ.ಹಂದ್ರಾಳ ತರಬೇತಿ ನೀಡಿದರು.
Published on

ಹೊಸಪೇಟೆ: ದೇಹ ರಚನೆಯಲ್ಲಿ ನಿರ್ನಾಳ ಗ್ರಂಥಿಗಳ ಪಾತ್ರ ಮುಖ್ಯವಾಗಿದೆ. ದೇಹದಲ್ಲಿ ಎಂಟು ಗ್ರಂಥಿಗಳಿದ್ದು, ಅವುಗಳ ಸಮತೋಲನಕ್ಕೆ ಯೋಗ ಸಹಕಾರಿ ಎಂದು ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಡಾ.ಎಸ್.ಬಿ.ಹಂದ್ರಾಳ ಹೇಳಿದರು.

ನಗರದ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯೋಗ ತರಬೇತಿ ಶಿಬಿರದಲ್ಲಿ ಮಾತನಾಡಿದರು. ನಿರ್ನಾಳ ಗ್ರಂಥಿಗಳು ಉತ್ಪಾದಿಸುವ ರಾಸಾಯನಿಕ ರಸದೂತಗಳೇ ಹಾರ್ಮೋನ್‌ಗಳು. ದೇಹದ ಯಾವ ಭಾಗಕ್ಕೆ ಯಾವ ರೀತಿ ಹಾರ್ಮೋನ್ ಪೂರೈಕೆಯಾಗಬೇಕು ಎನ್ನುವ ಸಂದೇಶ ನೀಡುವ ನಿಯಂತ್ರಣ ಕೇಂದ್ರವೇ ಪಿಟ್ಯುಟರಿ ಗ್ರಂಥಿ. ಮೆದುಳಿನಲ್ಲಿರುವ ಹೈಪೊಥಲಮಸ್ ಪ್ರಧಾನ ನಿಯಂತ್ರಕ ಶಕ್ತಿಯಾಗಿದ್ದು, ಪಿಟ್ಯುಟರಿ ಗ್ರಂಥಿ ಇತರ ಏಳು ಗ್ರಂಥಿಗಳನ್ನು ನಿಯಂತ್ರಿಸುತ್ತದೆ. ಗ್ರಂಥಿಗಳು ಸಮಸ್ಥಿತಿಯಲ್ಲಿದ್ದಾಗ ದೇಹ ಚನ್ನಾಗಿ ಕೆಲಸ ಮಾಡುತ್ತದೆ. ವಕ್ರಾಸನ, ಗೋಮುಖಾಸನ, ಮರ್ಕಟಾಸನ, ಸವಾರ್ಂಗಾಸನ, ನೌಕಾಸನ, ಅರ್ಧ ಚಂದ್ರಾಸನಗಳಿಂದ ನಿರ್ನಾಳ ಗ್ರಂಥಿಗಳು ಸಕ್ರಿಯವಾಗಿ ಹಾರ್ಮೋನ್‌ಗಳನ್ನು ಸಮಪ್ರಮಾಣದಲ್ಲಿ ಬಿಡುಗಡೆ ಆಗುವಂತೆ ಮಾಡುತ್ತವೆ ಎಂದರು.

ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಕಿರಣಕುಮಾರ್, ಸದಸ್ಯ ಬಾಲಚಂದ್ರ ಶರ್ಮಾ, ಬಳ್ಳಾರಿ ಉಸ್ತುವಾರಿ ರಾಜೇಶ್ ಕಾರ್ವಾ, ಫ್ರೀಡಂ ಪಾರ್ಕ್ ಸಂಚಾಲಕ ಶ್ರೀರಾಮ್, ಹಿರಿಯ ಯೋಗಪಟು ಅಶೋಕ ಚಿತ್ರಗಾರ, ಪ್ರಮುಖರಾದ ಮಂಗಳಮ್ಮ, ಕಟ್ಟಾ ನಂಜಪ್ಪ, ವೆಂಕಟೇಶ ವಾಸಿ, ವಿಠೋಬ ಬಲ್ಲೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net