ಯೋಗಕ್ಕೆ ಜಾತಿ, ಧರ್ಮ, ವರ್ಣಗಳ ಭೇದವಿಲ್ಲ

Sandur Yoggaa
ತೋರಣಗಲ್‌ನಲ್ಲಿ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ವೀಣಾ ಬೆಹನ್ ಉದ್ಘಾಟಿಸಿದರು. ಪ್ರಮುಖರಾದ ಅಜೇಯ ಮಂದಾನ, ಶ್ರೀಪಾದ ಜೋಷಿ, ಬಿ.ಕೆ.ರಾಜೇಶ್ವರಿ ಇದ್ದರು.
Published on

ಸಂಡೂರು: ಯುವಜನತೆ ಭಾರತೀಯ ಪರಂಪರೆ ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮೊರೆ ಹೋಗುತ್ತಿದ್ದಾರೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ವೀಣಾ ಬೆಹನ್ ಹೇಳಿದರು.

ತೋರಣಗಲ್‌ನಲ್ಲಿ ಹಮ್ಮಿಕೊಂಡಿದ್ದ ವಿಶ್ವಯೋಗ ದಿನಾಚರಣೆಯಲ್ಲಿ ರಾಜಯೋಗ ಕುರಿತು ವಿಶೇಷ ಉಪನ್ಯಾಸ ನೀಡಿದರು. ಯೋಗಕ್ಕೆ ಯಾವುದೇ ಭಾಷೆ, ಜಾತಿ, ಧರ್ಮ, ವರ್ಗ, ವರ್ಣಗಳ ಭೇದವಿಲ್ಲ. ಪ್ರತಿಯೊಬ್ಬರೂ ಸರಳ ಯೋಗಾಭ್ಯಾಸದ ಮೂಲಕ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ರಾಜಯೋಗದಿಂದ ಸಂತೋಷ, ತೃಪ್ತಿಯಿಂದ ಇರಲು ಸಾಧ್ಯ. ಪ್ರತಿಯೊಬ್ಬರೂ ಆತ್ಮಶುದ್ಧಿ ಮಾಡಿಕೊಂಡಾಗ ನೆರೆಮನೆಯಲ್ಲ ಇಡೀ ಜಗತ್ತು ಶುದ್ಧವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಾಗ, ದ್ವೇಷಗಳಿಂದ ಮುಕ್ತಿಯನ್ನು ಪಡೆಯಬೇಕು ಎಂದರು.

ಜಿಂದಾಲ್ ಕಂಪನಿಯ ಅಜೇಯ ಮಂದಾನ, ಯೋಗ ಗುರು ಶ್ರೀಪಾದ ಜೋಷಿ ಮಾತನಾಡಿದರು. ನಾಗೇಶ್ ಗಾದಿಗನೂರು, ವಕೀಲ ರಾಜಶೇಖರ್, ದೇವಣ್ಣ, ಸಿದ್ದಪ್ಪ, ಗುರುಪಾದಪ್ಪ ಇತರರಿದ್ದರು. ಸಿಂಧನೂರಿನ ಬ್ರಹ್ಮಕುಮಾರಿ ಪಾರ್ವತಿ ಅಕ್ಕ, ಜಗಳೂರು ಕೇಂದ್ರದ ಬ್ರಹ್ಮಕುಮಾರಿ ಭಾರತಿ ಅಕ್ಕ, ಬಿ.ಕೆ.ರಾಜೇಶ್ವರಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net