ಮಾನವೀಯತೆಗಾಗಿ ಯೋಗ ಕಾರ್ಯಕ್ರಮ

Yoga for Humanity Programme
ವಿಜಯಪುರ ನಗರದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ನಡೆದ ಯೋಗೋತ್ಸವ ಕಾರ್ಯಕ್ರಮವನ್ನು ಕಾತ್ರಾಳದ ಗುರುದೇವ ಆಶ್ರಮದ ಡಾ. ಅಮೃತಾನಂದ ಸ್ವಾಮೀಜಿ ಉದ್ಘಾಟಿಸಿದರು. ಡಾ.ಆರ್.ಎಸ್. ಮುಧೋಳ, ಡಾ.ಎಂ.ಬಿ. ಪಾಟೀಲ, ಡಾ. ಜ್ಯೋತಿ ಖೋದ್ನಾಪುರ, ಎಂ.ಪಿ. ದೊಡ್ಡಮನಿ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಯೋಗೋತ್ಸವದ ಅಂಗವಾಗಿ ‘ಮಾನವೀಯತೆಗಾಗಿ ಯೋಗ ಕಾರ್ಯಕ್ರಮ’ ನಡೆಯಿತು.

ಬಿಎಲ್​ಡಿಇ ಸಂಸ್ಥೆ ಬಿಎಲ್​ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಯೋಗ ಮತ್ತು ವ್ಯಾಯಾಮ ವಿಜ್ಞಾನ ಕೇಂದ್ರ, ಶರೀರಶಾಸ್ತ್ರ ವಿಭಾಗ ಮತ್ತು ನವದೆಹಲಿಯ ಮುರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

ಕಾತ್ರಾಳ ಗುರುದೇವ ಆಶ್ರಮದ ಡಾ. ಅಮೃತಾನಂದ ಸ್ವಾಮೀಜಿ ಉದ್ಘಾಟಿಸಿದರು. ಉಪಕುಲಪತಿ ಡಾ. ಆರ್.ಎಸ್. ಮುಧೋಳ, ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ಎಂ.ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಯೋಗ ಮತ್ತು ವ್ಯಾಯಾಮ ವಿಜ್ಞಾನ ವಿಭಾಗದ ಡಾ. ಜ್ಯೋತಿ ಖೋದ್ನಾಪುರ, ಯೋಗ ತರಬೇತುದಾರ ಎಂ.ಪಿ. ದೊಡ್ಡಮನಿ ಅವರು ಸೂರ್ಯ ನಮಸ್ಕಾರ ಆಸನಗಳು ಮತ್ತು ಪ್ರಾಣಾಯಾಮ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net