

ಮಂಡ್ಯ: ಆರೋಗ್ಯಯುತ ಜೀವನಕ್ಕಾಗಿ ಪ್ರತಿದಿನ ಯೋಗ, ವ್ಯಾಯಾಮ ಸೇರಿದಂತೆ ಯಾವುದಾದರೂ ದೈಹಿಕ ಚಟುವಟಿಕೆಗೆ ಒಂದು ಗಂಟೆ ಮೀಸಲಿಡಿ ಎಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಸೀತಾಲಕ್ಷ್ಮೀ ಕಿವಿಮಾತು ಹೇಳಿದರು.
ನಗರದ ಮಿಮ್ಸ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಯೋಗೋತ್ಸವದಲ್ಲಿ ಮಾತನಾಡಿದ ಅವರು, 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಬಂಧ ಯೋಗೋತ್ಸವ ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೂ ಡಿಜಿಟಲ್ ಪ್ರಮಾಣಪತ್ರ ನೀಡಲಾಗುವುದು ಎಂದರು.
ಯೋಗ ಗುರು ಶಂಕರ ನಾರಾಯಣಶಾಸ್ತ್ರಿ, ಯೋಗ ತರಬೇತುದಾರ ಶಿವರುದ್ರಸ್ವಾಮಿ, ಪತಂಜಲಿ ಯೋಗ ಶಿಕ್ಷಣ ಸಮಿತಿ ಮುಖ್ಯಸ್ಥರಾದ ರವಿ, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಮೂರ್ತಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಇತರರಿದ್ದರು.