

ಕೊಪ್ಪಳ: ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ರಾಷ್ಟ್ರಾದ್ಯಂತ ವಿಶೇಷವಾಗಿ ಆಚರಿಸಲಾಗಿದೆ. ರಾಜ್ಯಾದ್ಯಂತ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಅಮೃತ ಸರೋವರ ಕೆರೆಯಂಗಳ, ಶಾಲಾವರಣ, ಗ್ರಾಪಂಮಟ್ಟದಲ್ಲಿ ಆಚರಿಸುವ ಮೂಲಕ ಸಾಧನೆ ಮಾಡಿದೆ. ಯೋಗ ದಿನಾಚರಣೆ ಕುರಿತು ಕೇಂದ್ರ ಸರ್ಕಾರ ವಿಶೇಷ ಮ್ಯಾಗಜಿನ್ ಪ್ರಕಟಿಸುತ್ತಿದ್ದು, ಅದರಲ್ಲಿ ಕೊಪ್ಪಳದ ಗಿಣಿಗೇರಾ ಅಮೃತ ಸರೋವರ ಕೆರೆ ವಿಷಯ ಪ್ರಸ್ತಾಪಿಸಿರುವುದು ವಿಶೇಷ.
ಗ್ರಾಪಂ ಮಟ್ಟದಲ್ಲಿ ಯೋಗ ದಿನ ಆಚರಿಸಲಾಗಿದೆ. ರಾಜ್ಯಾದ್ಯಂತ 1.10 ಲಕ್ಷ ಜನ ಭಾಗಿಯಾಗಿದ್ದಾರೆ. ಜಿಲ್ಲೆಯ 72 ಅಮೃತ ಸರೋವರ ಕೆರೆ ಅಂಗಳದಲ್ಲಿ ಯೋಗ ಆಚರಿಸಲಾಗಿದೆ. 247 ಶಾಲೆ, ಗ್ರಾಪಂ ಮಟ್ಟದಲ್ಲಿ ಮಾಡಲಾಗಿದೆ. 5,452 ನರೇಗಾ ಕೂಲಿಕಾರರು, 9,668 ಶಾಲಾ ಮಕ್ಕಳು, 5,312 ಸಾರ್ವಜನಿಕರು ಒಟ್ಟು 20,751 ಜನರು ಭಾಗಿಯಾಗಿದ್ದಾರೆ. ಗಿಣಿಗೇರಾ ಅಮೃತ ಸರೋವರ ಕೆರೆ ಅಂಗಳದಲ್ಲಿ ಆಚರಿಸಿದ ಯೋಗ ಕಾರ್ಯಕ್ರಮದ ಫೋಟೋ ಬಳಕೆ ಮಾಡಲಾಗಿದೆ.
ಈ ಬಾರಿ ದೇಶಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಮಹತ್ವಪೂರ್ಣವಾಗಿ ಆಚರಿಸಲಾಗಿದೆ. ಶಾಲೆ, ಗ್ರಾಪಂ, ಅಮೃತ ಸರೋವರ ಕೆರೆ ಅಂಗಳದಲ್ಲಿ ಮಾಡಿದ್ದೇವೆ. 20 ಸಾವಿರ ಜನರು ಭಾಗಿಯಾಗಿದ್ದಾರೆ. ನಮ್ಮ ಜಿಲ್ಲೆಯ ಗಿಣಿಗೇರಾದಲ್ಲಿ ಆಚರಿಸಿದ ಫೋಟೋ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಹೊರ ತರುತ್ತಿರುವ ಮ್ಯಾಗಜಿನ್ನಲ್ಲಿ ಬಳಸಲಾಗಿದೆ. ರಾಹುಲ್ ರತ್ನಂ ಪಾಂಡೆಯ. ಜಿಪಂ ಸಿಇಒ ಕೊಪ್ಪಳ.
ರಾಹುಲ್ ರತ್ನಂ ಪಾಂಡೆಯ. ಜಿಪಂ ಸಿಇಒ ಕೊಪ್ಪಳ.