ಯೋಗ ಪ್ರೋಟೋಕಾಲ್ ಅಭ್ಯಾಸ

IMG-20240615-WA0015-2.jpg
Published on

ಹುಬ್ಬಳ್ಳಿ: ಇಲ್ಲಿಯ ಪತಂಜಲಿ ಯೋಗ ಸಮಿತಿ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನದ ಪೂರ್ವ ಸಿದ್ಧತೆಗಳ ಪ್ರಯುಕ್ತ ಯೋಗ ಪ್ರೋಟೋಕಾಲ್ ಅಭ್ಯಾಸ ಮತ್ತು ಪತಂಜಲಿ ಕಾರ್ಯಕರ್ತರ ಸಭೆ ಶನಿವಾರ ನಗರದ ಶ್ರೀ ಸಿದ್ಧಾರೂಢ ಮಠದಲ್ಲಿ ನಡೆಯಿತು.

ಪತಂಜಲಿ ಯೋಗ ಪೀಠದ ಕರ್ನಾಟಕ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಮಾರ್ಗದರ್ಶನ ನೀಡಿದರು.

ಯೋಗ ಎಂದರೆ ಜೋಡಣೆ, ಒಂದಾಗುವುದು ಎಂದರ್ಥ. ಯೋಗ ಶಾಸ್ತ್ರದ ಪ್ರಕಾರ ದೇಹ ಮತ್ತು ಮನಸ್ಸು ಒಂದಾಗುವ ಪ್ರಕ್ರಿಯೆಯೇ ಯೋಗ. ಯೋಗವು ಆರೋಗ್ಯವಂತರಿಗೆ ಜೀವನ ಪದ್ಧತಿ, ರೋಗಿಗಳಿಗೆ ಚಿಕಿತ್ಸೆ ಪದ್ಧತಿ, ಸಾಧನೆ ಮಾಡುವಂತಹ ಸಾಧಕರಿಗೆ ಇದು ಸಾಧನಾ ಪದ್ದತಿಯಾಗಿದೆ. ಯೋಗ ಶಿಕ್ಷಕರೆಂದರೆ ಕೇವಲ ಯೋಗ ಅಭ್ಯಾಸವನ್ನು ಕಲಿಸಿಕೊಡುವವರು ಎಂದರ್ಥವಲ್ಲ, ತಮ್ಮ ಆರೋಗ್ಯ, ತಮ್ಮ ಕುಟುಂಬದ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯ ರಕ್ಷಣೆ ಮಾಡುವವರು ಎಂದು ಭವರಲಾಲ್ ಆರ್ಯ ಹೇಳಿದರು.

ಹುಬ್ಬಳ್ಳಿ ಧಾರವಾಡ ನಗರದ ಪ್ರತಿ ವಾರ್ಡನಲ್ಲಿ ಉಚಿತ ಯೋಗ ಶಿಬಿರಗಳನ್ನು ಆಯೋಜಿಸಿ, ಉಚಿತ ನಿರಂತರ ಯೋಗ ಕೇಂದ್ರಗಳನ್ನು ಸ್ಥಾಪಿಸುವುದು, ಜತೆಗೆ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಸಾವಿರಾರು ಯೋಗ ಸಾಧಕರೊಂದಿಗೆ ಯೋಗ ಮಹೋತ್ಸವವನ್ನು ಆಚರಿಸುವ ಸಂಕಲ್ಪ ಹೊಂದಿದ್ದೇವೆ ಎಂದರು.

ಸಭೆಯಲ್ಲಿ ರಾಜೇಶ್ ಕುದರಿ, ವಿಜಯಲಕ್ಷ್ಮೀ, ವಾಮನ ಶಾನುಭಾಗ್, ರಮೇಶ ಶೆಟ್ಟಿ, ಪೂರ್ಣಿಮಾ ಹರವಿ, ಬಸವರಾಜ ಹರವಿ, ವೀಣಾ ಹೆಗಡೆ, ನೇತ್ರಾ ಸುರೇಬಾನ, ನಳಿನಿ, ಸುಭಾಷ್, ಸಂಧ್ಯಾ ಕುಬಸದ, ಭಾಗ್ಯಶ್ರಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net