ಜಾಬಿನ ಕಾಲೇಜಿನಲ್ಲಿ ಯೋಗ ದಿನ

IMG_20240621_202929_272.jpg
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗ, ಎನ್ ಸಿಸಿ, ಎನ್ಎಸ್ಎಸ್, ಪಿಜಿಕಲ್ ಎಜ್ಯುಕೇಶನ್ ಫೌಂಡೇಷನ್ ಆಫ್ ಇಂಡಿಯಾ ಹಾಗೂ ಶ್ರೀ ಆರೂಢ ಯೋಗ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು.

ಸಸಿಗೆ ನೀರೆರೆದು ಯೋಗ ಶಿಬಿರ ಉದ್ಘಾಟಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ. ಪಂಚಲಿಂಗಪ್ಪ ಕವಲೂರ ಅವರು, ಪ್ರಾಣಾಯಾಮ, ಯೋಗದ ವಿವಿಧ ಆಸನಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಯೋಗಾಭ್ಯಾಸ ಮಾಡಲಾಯಿತು.

ಡಾ. ಕವಲೂರ ಅವರನ್ನು ಸನ್ಮಾನಿಸಲಾಯಿತು.
ಎನ್ಎಸ್ಎಸ್ ಅಧಿಕಾರಿ ಡಾ. ಇ.ಬಿ. ಶೇಡಂಕರ, ಡಾ. ವೀಣಾ, ಎನ್ ಸಿಸಿ ಅಧಿಕಾರಿ ಡಾ. ಪ್ರಭಾಕರನ್ ಟಿ, ವಿ.ಆರ್. ವಾಘ್ಮೋಡೆ, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು, ಸ್ವಯಂ ಸೇವಕರು ಪಾಲ್ಗೊಂಡಿದ್ದರು.

ಪ್ರಾಚಾರ್ಯ ಡಾ. ಎಲ್.ಡಿ. ಹೊರಕೇರಿ ಸ್ವಾಗತಿಸಿದರು. ಸೂರಜ ಗಾಮನಗಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net